Home uncategorized ಜಿಲ್ಲೆಯಲ್ಲಿ ಹೆಚ್ಚಾದ ಕೋವಿಡ್ ಸೊಂಕಿತರ ಸಂಖ್ಯೆ | ಕೀಮ್ಸ್ ಆಸ್ಪತ್ರೆ ಬೆಡ್ ಪುಲ್..!

ಜಿಲ್ಲೆಯಲ್ಲಿ ಹೆಚ್ಚಾದ ಕೋವಿಡ್ ಸೊಂಕಿತರ ಸಂಖ್ಯೆ | ಕೀಮ್ಸ್ ಆಸ್ಪತ್ರೆ ಬೆಡ್ ಪುಲ್..!

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಇಷ್ಟು ದಿನಗಳ ಕಾಲ ಹುಬ್ಬಳ್ಳಿಯ ಸೂಪರ್ ಸ್ಪೇಷಾಲಿಟಿ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ್ತಾ ಇದ್ರು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಕೀಮ್ಸ್ ಆಸ್ಪತ್ರೆಯ ಬೆಡ್ ಗಳು ಭರ್ತಿಯಾಗಿವೆ. ಕೊರೊನಾ ಸೊಂಕಿತರಿಗೆ ಕೀಮ್ಸ್ ಆಸ್ಪತ್ರೆಯಲ್ಲಿ ಈಗ ಬೆಡ್ ಗಳ ಕೊರತೆ ಉಂಟಾಗುತ್ತಿದೆ. ಯಾರಾದರು ವ್ಯಕ್ತಿಯಲ್ಲಿ ಸೊಂಕು ಕಾಣಿಸಿಕೊಂಡ್ರೆ ತಕ್ಷಣಕ್ಕೆ ಕೀಮ್ಸ್ ಆಸ್ಪತ್ರೆಯಲ್ಲಿ ಬೆಡ್ ಗಳು ಸಿಗಲ್ಲ. ಸೊಂಕಿನಿಂದ ಗುಣಮುಖರಾಗುತ್ತಿರುವವರನ್ನ ಮತ್ತೊಂದು ಆಸ್ಪತ್ರೆಗೆ ಶಿಪ್ಟ್ ಮಾಡಿ, ಬೆಡ್ ವ್ಯವಸ್ಥೆ ಮಾಡುವ ಪರಿಸ್ಥಿತಿ ಬಂದೊದಗಿದೆ. ಬೆಡ್ ಹೊಂದಾಣಿಕೆ ಮಾಡಿದ ಬಳಿಕ ಸೊಂಕಿತರನ್ನ ಕೀಮ್ಸ್ ಗೆ ಕರೆತರಬೇಕಾಗಿರುವುದರಿಂದ ಆಂಬ್ಯಲೇನ್ಸ್ ಗಾಗಿ ಸೊಂಕಿತರು ಗಂಟೆಗಟ್ಟಲೆ ಕಾಯುತ್ತಿದ್ದಾರೆ.

ಕೊರೊನಾ ಬಂದ ಆರಂಭದ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಕಾಣಿಸಿಕೊಂಡಾಗ, ಹಾಸಿಗೆ ಸಮಸ್ಯೆ ಎದುರಾಗಿರಲಿಲ್ಲ. ಜಿಲ್ಲೆಯಲ್ಲಿ 555 ಪ್ರಕರಣಗಳು ಪತ್ತೆಯಾಗಿದ್ದು, 305 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಕೀಮ್ಸ್ ಆಸ್ಪತ್ರೆಯಲ್ಲಿರೋದು ಕೇವಲ 200 ಹಾಸಿಗೆ ಮಾತ್ರ. ಅದರಲ್ಲಿ 40 ಬೆಡ್ ಗಳು ಐಸಿಯು. ಪ್ರತಿನಿತ್ಯ 40ಕ್ಕು ಹೆಚ್ಚು ಜನರಲ್ಲಿ ಸೊಂಕು ಪತ್ತೆಯಾಗುತ್ತಿರುವುದರಿಂದ ನಗರದ ಹೆಗ್ಗೇರಿಯ ಆಯುರ್ವೆದಿಕ್ ಮಹಾವಿದ್ಯಾಲಯ ಮತ್ತು ಸಂಜೀವಿನಿ ಆಯುರ್ವೆದಿಕ್ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ. ಕೋವಿಡ್ ರೋಗಲಕ್ಷಣ ಇಲ್ಲದೆ ಪಾಸಿಟಿವ್ ಬಂದವರಿಗೆ ಈ ಆಸ್ಪತ್ರೆಗಳಿಗೆ ಶಿಪ್ಟ್ ಮಾಡಲಾಗುತ್ತಿದೆ. ಸೊಂಕಿನಿಂದ ತೀವ್ರವಾಗಿ ಬಳಲುತ್ತಿದ್ದವರಿಗೆ ಮಾತ್ರ ಕೀಮ್ಸ್ ನಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತೊಂದೆಡೆ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಲ್ಲಿ 6 ಸಾವಿರ ಬೆಡ್ ವ್ಯವಸ್ಥೆ ಮಾಡಿದೆ ಅಂತಾ ಹೇಳುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಸ್ಪೋಟ ಹೆಚ್ಚಾಗುತ್ತಿದ್ದು, ಸರಕಾರಿ ಕಚೇರಿಗಳು, ಪೊಲೀಸ್ ಠಾಣೆ, ಹಳ್ಳಿ ಹಳ್ಳಿಗಳು, ನಗರದ ಗಲ್ಲಿ ಗಲ್ಲಿ ಸೀಲ್ ಡೌನ್ ಆಗ್ತಿದ್ರೆ, ಮತ್ತೊಂದೆಡೆ ಸೊಂಕಿತರಿಗೆ ಚಿಕಿತ್ಸೆ ನೀಡಲು ಕೀಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಭರ್ತಿಯಾಗಿರೋದು ಮತ್ತೊಂದು ಚಿಂತೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments