ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಡಿ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹುಬ್ಬಳ್ಳಿ ಧಾರವಾಡದಲ್ಲಿ ಕೈಗೊಂಡಿದ್ದೇವೆ. ಆರು ಪ್ರಮುಖ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಟಗುಪ್ಪಿ ಆಸ್ಪತ್ರೆ ಅಭಿವೃದ್ಧಿ ಯೋಜನೆಯಲ್ಲಿ 26.18 ಕೋಟಿ ವೆಚ್ಚದ ಚಿಟಗುಪ್ಪಿ ಆಸ್ಪತ್ರೆ ನವೀಕೃತಗೊಳಿಸಲಾಗುವುದು, ಕಾಮಗಾರಿಯಲ್ಲಿ ಒಂದನೇ ಮಹಡಿ ಕಟ್ಟಡ ಹಾಗೂ ಆಡಳಿತ ವಿಭಾಗದ ನಾಲ್ಕು ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
20.26 ಕೋಟಿ ವೆಚ್ಚದಲ್ಲಿ ನಗರದ ನೆಹರು ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು,ಈ ಕಾಮಗಾರಿಯಲ್ಲಿ ಜಿ+2 ಕಟ್ಟಡ ಟೇಬಲ್ ಟೆನ್ನಿಸ್ ಕೋರ್ಟ್, ಕಾನ್ಫರೆನ್ಸ್ ಸಭಾಂಗಣದಲ್ಲಿ ಮತ್ತು ಸಾಂಸ್ಕೃತಿಕ ಭವನ,ಜಿಮ್ನಾಸ್ಟಿಕ್, ಕ್ರೀಡಾಂಗಣ ಕಟ್ಟಡ ಕಾಮಗಾರಿಗಳನ್ನು ಆಯೋಜಿಸಲಾಗಿದೆ ಎಂದರು.
5.08 ಕಿ.ಮೀ ಮುಖ್ಯ ರಸ್ತೆಯ ಒಟ್ಟು 50.75 ಕೋಟಿ ವೆಚ್ಚದಲ್ಲಿ ರೈಲೈ ಸ್ಟೇಷನ್ ರಸ್ತೆಯ ಸ್ಮಾರ್ಟ್ ಸಿಟಿ ರಸ್ತೆ ಪ್ಯಾಕೇಜ್ -02ರ ಅಭಿವೃದ್ಧಿ ಕಾಮಗಾರಿಯನ್ನು ಹೊಂದಲಾಗಿದೆ. ಇವುಗಳಲ್ಲಿ ಕ್ರೀಡಾಂಗಣದ ಸುತ್ತಲಿನ ಜೆಸಿ ನಗರ ರಸ್ತೆ ಕೊಪ್ಪಿಕರ,ಕೋಯಿನ್ ರಸ್ತೆ ,ವಿಕ್ಟೋರಿಯಾ, ಬ್ರಾಡ್ವೇ, ಮರಾಠಗಲ್ಲಿ ಸೇರಿದಂತೆ ಸಿಬಿಟಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಗಣೇಶ ಪೇಟೆಯ ಮೀನು ಮಾರುಕಟ್ಟೆಯನ್ನು ಬೇಸ್ಮೆಂಟ್,ಗ್ರೌಂಡ್ ಫ್ಲೋರ್ ಹಾಗೂ ಮೆಜ್ ನೈನ್ ಫ್ಲೋರ್ ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ.ಈ ಕಾಮಗಾರಿಗಾಗಿ ರೂ.5.38 ಕೋಟಿ ಅಭಿವೃದ್ಧಿ ಕಾಮಗಾರಿಯನ್ನು ಹೊಂದಲಾಗಿದೆ.ರೂ.4.60 ಕೋಟಿ ವೆಚ್ಚದಲ್ಲಿ ಮೇದಾರ ಓಣಿಯ ಪಾರ್ಕಿಂಗ್ ಹಾಗೂ ಡಿಸ್ಪೆನ್ಸರಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಉಣಕಲ್ ಕೆರೆ ಅಭಿವೃದ್ಧಿ ಯೋಜನೆ ಭಾಗ-01 ರ ಕಾಮಗಾರಿಯನ್ನು ರೂ.14.83 ಕೋಟಿ ವೆಚ್ಚದಲ್ಲಿ
ಕೈಗೊಳ್ಳಲಾಗುವುದು.ಈ ಯೋಜನೆಯಲ್ಲಿ ಬಯೋರೆಮಿಡಿಯೇಶನ್,ಕೆರೆಯಲ್ಲಿ ಹೂಳು ತೆಗೆಯುವುದು,ನೀರಿನ ಗುಣಮಟ್ಟ,ಸಬ್ ಮರ್ಜಡ್ ಎರಿಯೇಟರ್ಸ್ ಹಾಗೂ ಫ್ಲೋಟಿಂಗ್ ರ್ಯಾಪ್ಚರ್ಸ್ ನ್ನು ಅಳವಡಿಸುವ ಯೋಜನೆಗೆ ಒಟ್ಟು 119 ಕೋಟಿ ರೂ.ವೆಚ್ಚದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,
ಅವರ ನೇತೃತ್ವದಲ್ಲಿ ಭೂಮಿಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಜೋಶಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ,ಪ್ರಸಾದ್ ಅಬ್ಬಯ್ಯ,ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ,ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ,ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್,ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.