ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಲಭೆಗೆ ಪ್ರಚೋದನೆ ನೀಡಿದ್ದ ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿ ವಾಸಿಂ ಪಠಾಣನನ್ನು ವಶಕ್ಕೆ ಪಡೆದು, ಹಳೇ ಹುಬ್ಬಳ್ಳಿ ಠಾಣೆಗೆ ಕರೆದುಕೊಂಡು ಬರಲಾಗಿದೆ. ಗಲಭೆ ನಂತರ ಮುಂಬಯಿಗೆ ಪಲಾಯಗೈದಿದ್ದ ಈತನನ್ನು ಖಚಿತ ಮಾಹಿತಿ ಮೇರೆಗೆ ತನಿಖಾಧಿಕಾರಿ ಅಲ್ತಾಫ ಮುಲ್ಲಾ ನೇತೃತ್ವದ ತಂಡ ಮುಂಬಯಿಯಲ್ಲಿ ವಶಕ್ಕೆ ಪಡೆದು, ವಿಮಾನ ಮೂಲಕ ಬೆಳಗಾವಿಗೆ ಕರೆತಂದು ಅಲ್ಲಿಂದ ರಸ್ತೆ ಮೂಲಕ ಹಳೇಹುಬ್ಬಳ್ಳಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.