Home ರಾಜ್ಯ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಕಳ್ಳತನ ಆರೋಪಿ ಪತ್ತೆ

ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಕಳ್ಳತನ ಆರೋಪಿ ಪತ್ತೆ

ಹುಬ್ಬಳ್ಳಿ‌‌  : ಸೂಪರ್ ಸ್ಪೇಷಾಲಿಟಿ‌‌ ಆಸ್ಪತ್ರೆಯ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ ಕೊರೊನಾ ‌ಸೋಂಕಿತ ಕಳ್ಳತನ ಆರೋಪಿ ಪತ್ತೆಯಾಗಿದ್ದಾ‌ನೆ.  ಪಿ.14537  ರೋಗಿಯಾಗಿ‌‌ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಹಾರ್ಡವೇರ್ ಅಂಗಡಿಗಳ ಕಳ್ಳತನ ‌ಆರೋಪದ ಮೇಲೆ ಬಂಧಿತನಾಗಿದ್ದ. ಆದ್ರೆ ನಿನ್ನೆ ಬೆಳಗ್ಗೆ 5. 30 ರ ಸುಮಾರಿಗೆ  ಆಸ್ಪತ್ರೆಯ ಕೋವಿಡ್ ವಾರ್ಡ್ ನಿಂದ ಪರಾರಿಯಾಗಿದ್ದ. ಈತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈತ ಈಗ ಗದಗದ ತನ್ನ ನಿವಾಸದಲ್ಲಿ‌ ಸೆರೆಸಿಕ್ಕಿದ್ದಾನೆ.ಗದಗ ಬೆಟಗೇರಿ ಪೊಲೀಸರ ಸಹಾಯದ‌ ಮೂಲಕ ಹುಬ್ಬಳ್ಳಿಯ ಪೋಲೀಸರು ಮತ್ತೆ ಮಾಡಿ ಈತನನ್ನು ಬಂಧಿಸಿದ್ದಾರೆ. ಆದ್ರೆ ಈತನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು, ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಿಮ್ಸ್‌ನಿಂದ ತಪ್ಪಿಸಿಕೊಂಡ ಮೇಲೆ ಈತ ವಾಹನದ ಮೂಲಕ ಗದಗ ತಲುಪಿದ್ದಾನೆ.‌ ಸೋಂಕು ಅಂಟಿಸಿಕೊಂಡಿದ್ದರೂ ಹುಬ್ಬಳ್ಳಿಯಿಂದ ಗದಗಕ್ಕೆ‌ ಹೋಗಿ ಸುತ್ತಾಡಿದ್ದಾನೆ.‌ ಹೀಗಾಗಿ ಈತ ಸುತ್ತಾಡಿದ ಸ್ಥಳ ಹಾಗೂ ಸಂಪರ್ಕಿತರನ್ನು ಹುಡುಕುವದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಈತನಿಂದ  ಅದೆಷ್ಟು ಜನರಿಗೆ ಕೊರೊನಾ ವೈರಸ್ ಅಂಟಿದೆಯೋ ಎಂಬ ಭಯ ಕಾಡುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments