ಬೆಂಗಳೂರು: ಇಂದು ವಿಧಾನಪರಿಷತ್ನಲ್ಲಿ ನಡೆದ ಕೋಲಾಹಲದ ಬಗ್ಗೆ ಉಪಸಭಾಪತಿ ಪ್ರತಿಕ್ರಿಯಿಸಿದ್ದಾರೆ. ಸಭಾಪತಿಗಳ ಮೇಲೆ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅವಿಶ್ವಾಸ ಮಂಡಿಸಿದ ಮೇಲೆ ಅವರು ಸಭೆಯ ನೇತೃತ್ವ ವಹಿಸಲು ಬರಲ್ಲ. ಹೀಗಾಗಿ ಸರ್ಕಾರದ ಆದೇಶದಂತೆ ಕಲಾಪ ನಡೆಸಲು ಪೀಠದಲ್ಲಿ ನಾನು ಕುಳಿತಿದ್ದೆ. ಅಷ್ಟರಲ್ಲಿ ಬಂದು ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ್ರು ಎಂದು ಧರ್ಮೇಗೌಡ ತಿಳಿಸಿದ್ದಾರೆ.
ಸದನದಲ್ಲಿ ನಡೆದ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅವ್ರು, ಒಬ್ಬರು ಪೀಠದಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ರು…ಮತ್ತೊಬ್ಬರು ಪೀಠದಿಂದ ಎಳೆದೊಯ್ದರು. ನಾನು ನಿಯಮದಂತೆ ಕುಳಿತು ಸಭೆ ನಡೆಸಲು ತೀರ್ಮಾನಿಸಿದ್ದೆ. ಅವಿಶ್ವಾಸ ನೋಟಿಸ್ ಕೊಟ್ಟ ನಂತರ ಸಭಾಪತಿ ಪೀಠದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಕೂರೋದಿಲ್ಲ ಅನ್ನೋ ಅಭಿಪ್ರಾಯ ಇತ್ತು. ಹೀಗಾಗಿ ನಾನು ಕುಳಿತೆ ಎಂದು ಸ್ಪಷ್ಟಪಡಿಸಿದ್ರು. ಸಭಾಪತಿ ಬರದಂತೆ ಬಿಜೆಪಿಯವರು ಡೊರ್ ಕ್ಲೋಸ್ ಮಾಡಿದ್ದು ಸರಿನಾ ಅಂತಾ ಕೇಳಿದ ಪ್ರಶ್ನೆಗೆ ನೀವು ಆ ಪ್ರಶ್ನೆಯನ್ನ ಬಿಜೆಪಿಯವರನ್ನೇ ಕೇಳಿ. ನಾನು ಒಬ್ಬನೇ ಇದ್ದೆ ಏನು ಮಾಡೋಕ್ಕಾಗುತ್ತೆ ಎಂದ್ರು.