ಬಾಲಿವುಡ್​ನ ಫೇಮಸ್ ಖಳನಟ ಮಹೇಶ್ ಇನ್ನಿಲ್ಲ

0
287

ಮುಂಬೈ: ಬಾಲಿವುಡ್​​ನ ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಿಗೆ ಜೀವ ತುಂಬಿದ ನಟ ಮಹೇಶ್ ಆನಂದ್ ಮೃತಪಟ್ಟಿದ್ದಾರೆ.​ ಆನಂದ್​ ಅವರು ಮುಂಬೈನಲ್ಲಿ ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಯಾವುದೇ ಆತ್ಮಹತ್ಯೆ ಪತ್ರ ಪೊಲೀಸರಿಗೆ ಸಿಕ್ಕಿಲ್ಲ. ಮಹೇಶ್​ ಅವರ ಮೃತದೇಹ ಅಂಧೇರಿಯ ವೆಸ್ಟ್​ ಯಾರಿ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಕಂಡುಬಂದಿದೆ. ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮಹೇಶ್ ಪತ್ನಿ ಮೋಸ್ಕೋದಲ್ಲಿ ವಾಸವಿದ್ದು ಮುಂಬೈನ ಮನೆಯಲ್ಲಿ ಒಬ್ಬರೇ ಇದ್ದರು. ಮಹೇಶ್ ವಿಪರೀತ ಮದ್ಯಪಾನ ಮಾಡುತ್ತಿದ್ದರು ಅಂತ ತಿಳಿದುಬಂದಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಿಕಂದರ್​ ಭಾರ್ತಿ ನಿರ್ದೇಶನದ ಚಿತ್ರ ‘ರಂಗ್​ಲೀಲಾ ರಾಜಾ’ ಇವರ ಕೊನೆಯ ಸಿನಿಮಾ ಆಗಿದ್ದು, ಕಳೆದ ತಿಂಗಳಷ್ಟೇ ಬಿಡುಗಡೆಯಾಗಿತ್ತು. ಶಾಹೇನ್​ಶಾಹ್​, ಕೂಲಿ ನಂಬರ್ 1, ಸ್ವರ್ಗ್​, ಕುರುಕ್ಷೇತ್ರ, ವಿಜೇತ ಮೊದಲಾದ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಟರಾದ ಅಮಿತಾಭ್​ ಬಚನ್​, ಧರ್ಮೇಂದ್ರ, ಗೋವಿಂದ, ಸಂಜಯ್ ದತ್​ ಅವರ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here