ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ಕನ್ನಡಿಗ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿಗೆ ನೀಡಿದ ಕೊಡುಗೆ ಅಪಾರ. ದ್ರಾವಿಡ್ ಬ್ಯಾಟಿಂಗ್ ನೋಡುವುದೇ ಒಂದು ಸುಂದರ ಅನುಭವವಾಗಿತ್ತು, ದ್ರಾವಿಡ್ ಒಂದೊಂದು ಬಾಲ್ಗಳನ್ನು ಎದುರಿಸುತ್ತಿದ್ದ ರೀತಿ, ಅವರ ಬ್ಯಾಟಿಂಗ್ ಟೆಕ್ನಿಕ್ಗೆ ಇಡೀ ಕ್ರಿಕೆಟ್ ಲೋಕವೇ ತಲೆಬಾಗಿದೆ. ದ್ರಾವಿಡ್ ಆಟಕ್ಕೆ ಫಿದಾ ಆಗದಿರೋರೇ ಇಲ್ಲ!
ಇನ್ನು ಇದೇ ದ್ರಾವಿಡ್ ಆಟದ ಟೆಕ್ನಿಕ್ ಅನುಸರಿಸಿದ್ರೆ ಕೊರೋನಾದಿಂದ ದೂರ ಉಳಿಯಬಹುದು ಅಂತ ಸಾಗರ್ ಎಂಬ ಅಭಿಮಾನಿಯೊಬ್ಬರು ದ್ರಾವಿಡ್ ಬ್ಯಾಟಿಂಗ್ ವೈಭವದ ಕೆಲಸವೊಂದು ಫೋಟೋಗಳನ್ನು ಹಾಕಿ ವಿವರಣೆ ನೀಡಿದ್ದಾರೆ. ಅದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅವುಗಳನ್ನು ನೀವೇ ನೋಡಿ..
1) ಅಪಾಯದಿಂದ ದೂರವಿರಲು ಅಂತರ ಕಾಯ್ದುಕೊಳ್ಳಿ
The best way to avoid danger is to keep a distance pic.twitter.com/3h9osqZKtn
— Sagar (@sagarcasm) March 16, 2020
2) ಕೈಗಳನ್ನು ಸ್ವಚ್ಛ ಮತ್ತು ಸುರಕ್ಷಿತವಾಗಿಟ್ಟುಕೊಳ್ಳಿ
It’s important to have a clean and safe pair of hands pic.twitter.com/0XOC73rJvI
— Sagar (@sagarcasm) March 16, 2020
3) ಗಾಬರಿ ಬೇಡ ; ತಾಳ್ಮೆಯಿದ್ದರೆ ಎಂಥಾ ಕ್ಲಿಷ್ಟಕರ ಸಮಸ್ಯೆಯಿಂದಲೂ ಹೊರಬರಬಹದು.
Tough times don't last, tough men do pic.twitter.com/wgVJrx17IN
— Sagar (@sagarcasm) March 16, 2020
4) ಕಷ್ಟಗಳಿಗೆ ಕೊನೆಯಿರಲ್ಲ, ಧೈರ್ಯದಿಂದ ಎದುರಿಸುವವನು ಗೆಲ್ಲಬಲ್ಲ
Tough times don't last, tough men do pic.twitter.com/wgVJrx17IN
— Sagar (@sagarcasm) March 16, 2020
5) ಅಗತ್ಯಬಿದ್ದರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಲು ರೆಡಿಯಾಗಿರಿ
Be ready to work from a different place when needed pic.twitter.com/gxzfaULwFt
— Sagar (@sagarcasm) March 16, 2020
6) ಸರಿಯಾದ ಸಮಯ ಎಂದು ನಿಮಗನಿಸಿದ್ರೆ ಆ ಕೂಡಲೇ ಹೊರಗಡೆ ಕೆಲಸ ಮಾಡುತ್ತಿರುವ ನಿಮ್ಮ ತಂಡದ ಸದಸ್ಯರನ್ನು ಕರೆಸಿಕೊಳ್ಳಿ, ಆ ಕ್ಷಣ ಯಾರದ್ದೇ ವೈಯಕ್ತಿಕ ಮೈಲುಗಲ್ಲಿನ ಚಿಂತೆ ಬೇಡ.
Call back your team members from offsite when you think the time is right, without worrying about someone’s personal milestones pic.twitter.com/pkAkhQXmVx
— Sagar (@sagarcasm) March 16, 2020