ಸೂಪರ್​ ಓವರ್ ಟೈ ಆದ್ರೂ ಇಂಗ್ಲೆಂಡ್ ವರ್ಲ್ಡ್​ಕಪ್ ಗೆದ್ದಿದ್ದು ಹೇಗೆ?

0
605

ನೋಡು ನೋಡುತ್ತಿದ್ದಂತೆ ವರ್ಲ್ಡ್​​ಕಪ್​ ಮುಗಿದಿದೆ. ಕ್ರಿಕೆಟ್​ ಜನಕರು ಚೊಚ್ಚಲ ಬಾರಿಗೆ ವಿಶ್ವಕಪ್​ಗೆ ಮುತ್ತಿಕ್ಕಿದ್ದಾರೆ. ತಾಯಿ ನೆಲದಲ್ಲಿ ನಡೆದ ಟೂರ್ನಿಯಲ್ಲಿ ಇಂಗ್ಲೆಂಡ್​ ವಿರೋಚಿತ ಗೆಲುವು ಪಡೆದು ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಫೈನಲ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 241ರನ್ ಮಾಡಿತು. 242ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್​ ಕೂಡ ಅಷ್ಟೇ ರನ್ ಪೇರಿಸಿತು. ಮ್ಯಾಚ್ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 15ರನ್ ಮಾಡಿತು. 16ರನ್​ ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ಕೂಡ 15ರನ್ ಮಾತ್ರ ಮಾಡಲು ಸಾಧ್ಯವಾಯ್ತು. ಹೀಗಾಗಿ ಸೂಪರ್ ಓವರ್ ಕೂಡ ಟೈ ಆಯ್ತು.
ಸೂಪರ್ ಓವರ್ ಟೈಯಾದ್ರೂ ಇಂಗ್ಲೆಂಡ್​ ಗೆದ್ದಿದ್ದು ಹೇಗೆ? : ಸೂಪರ್ ಓವರ್ ಟೈ ಆಗಿದ್ದರಿಂದ ಬೌಂಡರಿ ಆಧಾರದಲ್ಲಿ ಗೆಲುವು ನಿರ್ಧರಿಸಲಾಯಿತು. 50 ಓವರ್ ಗಳಲ್ಲಿ 24 ಬೌಂಡರಿಗಳನ್ನು ಬಾರಿಸಿದ್ದ ಇಂಗ್ಲೆಂಡ್ ಮ್ಯಾಚ್ ಗೆದ್ದಿತು. ನ್ಯೂಜಿಲೆಂಡ್ 16 ಬೌಂಡರಿ ಮಾತ್ರ ಗಳಿಸಿತ್ತು. ಹೀಗಾಗಿ ನ್ಯೂಜಿಲೆಂಡ್ ಸತತ ಎರಡು ವಿಶ್ವಕಪ್​​ನಲ್ಲಿ ಫೈನಲ್​ನಲ್ಲಿ ನಿರಾಸೆ ಅನುಭವಿಸಬೇಕಾಯಿತು.

LEAVE A REPLY

Please enter your comment!
Please enter your name here