ಚಿಕ್ಕಮಗಳೂರು: ಶಾಲಾ-ಕಾಲೇಜು ಆರಂಭವಾಗಿ ವಾರವೂ ಕಳೆದಿಲ್ಲ. ಅದಾಗಲೇ ಇಬ್ಬರು ಶಿಕ್ಷಕರಿಗೆ ಕೊರೋನ ದೃಢಪಟ್ಟು ಶಾಲೆಗೆ ಬೀಗ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ.
ಕಳಸದ ಜಿಎಂಇ ಶಾಲೆಯ 15 ಶಿಕ್ಷಕರಲ್ಲಿ ಇಬ್ಬರಿಗೆ ಕೊರೋನ ದೃಢಪಟ್ಟ ಹಿನ್ನೆಲೆ, ಜನವರಿ 8 ರ ತನಕ ಶಾಲೆಯನ್ನು ಬಂದ್ ಮಾಡಿದ್ದಾರೆ. ಶಾಲೆಯಲ್ಲಿ 35-40 ಮಕ್ಕಳು ಅಂದು ಶಾಲೆಗೆ ಬಂದಿದ್ದು, ಎಲ್ಲರ ಮೇಲೂ ನಿಗಾವಹಿಸಲಾಗಿದೆ. ಉಳಿದ 13 ಶಿಕ್ಷಕರ ಕೊರೋನಾ ವರದಿ ನೆಗೆಟಿವ್ ಬಂದಿದೆ. ಈಗಾಗಲೇ ಶಿಕ್ಷಣ ಇಲಾಖೆ ಮಕ್ಕಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಠಿಯಿಂದ ಕೊರೋನಾ ಪರೀಕ್ಷೆಗೆ ಮುಂದಾಗಿದ್ದು, ಇಡೀ ಶಾಲೆಯನ್ನೇ ಬಂದ್ ಮಾಡಲಾಗಿದೆ.
– ಸಚಿನ್ ಶೆಟ್ಟಿ ಚಿಕ್ಕಮಗಳೂರು