Sunday, May 29, 2022
Powertv Logo
Homeರಾಜ್ಯಆದಿತ್ಯ ರಾವ್ ಮಾನಸಿಕ ಅಸ್ವಸ್ಥ : ಬಸವರಾಜ್ ಬೊಮ್ಮಾಯಿ

ಆದಿತ್ಯ ರಾವ್ ಮಾನಸಿಕ ಅಸ್ವಸ್ಥ : ಬಸವರಾಜ್ ಬೊಮ್ಮಾಯಿ

ಬೆಳಗಾವಿ : ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆತ ಕೆಲಸ ಸಿಕ್ಕಿಲ್ಲವೆಂಬ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದನು. ಅಲ್ಲದೆ ಆತ ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಇಡುವುದಾಗಿ ಬೆದರಿಸಿ ಹುಸಿ ಬಾಂಬ್ ಕರೆ ಮಾಡಿ ಶಿಕ್ಷೆಯು ಅನುಭವಿಸಿದ್ದಾನೆ. ಅಷ್ಟೇ ಅಲ್ಲ ಈಗಾಗಲೇ ಎರಡು ಬಾರಿ ಆತನ ಮೇಲೆ ಕಂಪ್ಲೆಂಟ್ ದಾಖಲಾಗಿತ್ತು. ಆದ್ದರಿಂದ ಆತನ ಬಗ್ಗೆ ಅನುಮಾನ ಬಂದಿದ್ದ ಕಾರಣ ವಿಚಾರಣೆ ಆರಂಭಿಸಿ ಸಂಬಂಧಿಕರನ್ನು ವಿಚಾರಿಸಲಾಗಿದೆ. ಈ ವಿಷಯ ಆದಿತ್ಯನಿಗೆ ಗೊತ್ತಾಗಿ ಬೇರೆ ದಾರಿಯಿಲ್ಲದೆ  ಡಿಜಿಪಿ ಆಫೀಸಿಗೆ ಬಂದು ಶರಣಾಗಿದ್ದಾನೆ ಎಂದರು. 

ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್​ನವರು ಅಲ್ಪಸಂಖ್ಯಾತರ ಓಲೈಕೆಗೆ ಪೈಪೋಟಿ ನಡೆಸುತ್ತಿದ್ದಾರೆ. ಆದ್ದರಿಂದ ನಿಮ್ಮ ರಾಜಕೀಯ ಲಾಭಕ್ಕಾಗಿ ದೇಶದ್ರೋಹಿ ಕೃತ್ಯಗಳನ್ನು ಮಾಡುವವರಿಗೆ ಪ್ರಚೋದನೆ ಕೊಡದೆ  ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಟೀಕಾ ಪ್ರಹಾರ ನಡೆಸಿದರು. 

LEAVE A REPLY

Please enter your comment!
Please enter your name here

- Advertisment -

Most Popular

Recent Comments