Saturday, May 28, 2022
Powertv Logo
Homeರಾಜ್ಯಎಂ.ಬಿ.ಪಾಟೀಲ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ : ಆರಗ ಜ್ಞಾನೇಂದ್ರ 

ಎಂ.ಬಿ.ಪಾಟೀಲ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ : ಆರಗ ಜ್ಞಾನೇಂದ್ರ 

ಶಿವಮೊಗ್ಗದಲ್ಲಿ : ಗೃಹ ಸಚಿವರಾಗಲು ಜ್ಞಾನೇಂದ್ರ ಅರ್ಹರಲ್ಲ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ ಇವರು ಕೊಡೋ ಫಿಟ್, ಅನ್ ಫಿಟ್ ಎಂಬ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ  ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಧರ್ಮದ ವಿಷಯದಲ್ಲಿ ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಗಲಭೆಯಾಗಿದೆ. ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಅವರ ಹೆಡೆಮುರಿ ಕಟ್ಟಿ ತರುವಂತಹ ಪ್ರಯತ್ನ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ಕೊಡದಂತಹ ಎಲ್ಲಾ ಮೆಸೇಜ್ ಕಳುಹಿಸುತ್ತೇವೆ. ಒಂದೊಂದು ರಾಜ್ಯಕ್ಕೂ ಒಂದೊಂದು ರೀತಿ ಇರುತ್ತದೆ. ನೋಡೋಣ ಸಂದರ್ಭಕ್ಕೆ ಅನುಗುಣವಾಗಿ, ಪ್ರಕರಣಕ್ಕೆ ಅನುಗುಣವಾಗಿ ಪೊಲೀಸರು ನಿರ್ಧಾರ ಕೈಗೊಳ್ಳುತ್ತಾರೆ. ನಾವು ಹಾಗೆ ಮಾಡಿ, ಹೀಗೆ ಮಾಡಿ, ಈ ಸೆಕ್ಷನ್ ಹಾಕಿ ಅಂತಾ ಹೇಳಲು ಆಗಲ್ಲ ಎಂದರು.

ಶಿವಮೊಗ್ಗದಲ್ಲಿ ಮತ್ತೊಂದು ಕೋಮುಗಲಭೆ ತಪ್ಪಿಸಿದ ಪೊಲೀಸರು ವಿಚಾರ ಹಿನ್ನಲೆ ಈ ಬಗ್ಗೆ ನಾನು ಕೂಡಾ ಕೇಳಿದ್ದೇನೆ.‌ ಯಾರನ್ನೋ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ಅವರ ಮೇಲೆ ಮೊಕದ್ದಮೆ ಹೂಡಿದ್ದಾರೆ.ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಗೃಹ ಸಚಿವರಾಗಲು ಆರಗ ಜ್ಞಾನೇಂದ್ರ ಅರ್ಹರಲ್ಲ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಗೃಹ ಸಚಿವರ ಬಗ್ಗೆ ಫಿಟ್, ಅನ್ ಫಿಟ್ ಎಂಬ ಬಗ್ಗೆ ಇವರ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿ ಏನಾಗಿತ್ತು. ಗೃಹ ಸಚಿವರನ್ನು ಡಮ್ಮಿ ಮಾಡಿದ್ದರು. ಗೃಹ ಇಲಾಖೆಯನ್ನು ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಕೈಯಲ್ಲಿ ಕೊಟ್ಟಿದ್ದರು. ಒಂದೊಂದು ಪೋಸ್ಟ್​​ಗೂ ಏಜೆಂಟರನ್ನು ನೇಮಕ ಮಾಡಿದರು.

ಅದುವಲ್ಲದೇ 17 ಕ್ಕು ಹೆಚ್ಚು ಹಿಂದು – ಮುಸ್ಲಿಂ ಯುವಕರ ಕೊಲೆಯಾಯ್ತು. ಟಿಪ್ಪು ಜಯಂತಿಯನ್ನು ಅನಾವಶ್ಯಕವಾಗಿ ಆಚರಿಸಿ ಇಡೀ ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡಿದರು. ಇವರು ನನಗೆ ಸರ್ಟಿಫಿಕೇಟ್ ಕೊಡಬೇಕಾ. ನಮ್ಮ ಕರ್ತವ್ಯವನ್ನು ನಾವು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

- Advertisment -

Most Popular

Recent Comments