ಬೆಂಗಳೂರು : ಮೋಸದಿಂದ ನೇಮಕ ಆದವರನ್ನ ಬಿಡುವ ಮಾತೇ ಇಲ್ಲ, ಅದರಲ್ಲೂ ದಿವ್ಯಾ ಹಾಗರಗಿ ಅವರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಕ್ಕೆ ಸಂಬಂಧ ಮಾತನಾಡಿದ ಅವರು, ಸದ್ಯ ಈ ಕೇಸ್ನಲ್ಲಿ ಸಿಐಡಿ ತನಿಖೆ ಮುಂದುವರೆದಿದ್ದು, ರಾಜಕಾರಣಿಗಳು, ಅಧಿಕಾರಿಗಳು ಇದರ ಹಿಂದೆ ಇರಬಹುದು. ನಿನ್ನೆ ಗನ್ ಮ್ಯಾನ್ ಅರೆಸ್ಟ್ ಮಾಡಲಾಗಿದೆ. ಕಷ್ಟಪಟ್ಟು ಓದಿ ಬರೆದವರ ಬದುಕಿಗೆ ಮಣ್ಣಾಕಿದ್ದಾರೆ. ಹೀಗಾಗಿ ದಿವ್ಯಾ ಅವರನ್ನ ಬಿಡುವ ಪ್ರಶ್ನೆಯೇ ಇಲ್ಲ. ಒಬ್ಬೊಬ್ಬರನ್ನ ಹಿಡಿಯುವ ಕೆಲಸ ಆಗುತ್ತಿದೆ ಎಂದಿದ್ದಾರೆ.
ಇನ್ನು ಪಿಎಸ್ಐ ನೇಮಕಾತಿ ಅಕ್ರಮದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮಕೈಗೊಳ್ಳಲಾಗುವುದು ಇದರ ಹಿಂದೆ ರಾಜಕಾರಣಿಗಳು ಇರಬಹುದು. ಯಾರೇ ಇದ್ರು ಬಿಡುವುದಿಲ್ಲ, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಓದಿದವರಿಗೆ ಅನ್ಯಾಯ ಆಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.