ಹಾಸನ: ಜಾನುವಾರುಗಳು ರೈತರ ಬೆನ್ನೆಲುಬು ಎನ್ನೋದು ಎಲ್ಲರಿಗೂ ಗೊತ್ತಿರೊ ವಿಷಯ. ಜಾಗತಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ರೈತ ಮಾತ್ರ ತಾನು ಉಳಿಮೆ ಮಾಡೋ ಜಾನುವಾರುಗಳ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತಾನೆ. ಅದರ ಜೊತೆಗೆ ಕೆಲ ರೈತರು ಜಾನುವಾರುಗಳನ್ನ ಕೊಳ್ಳಲು ಮತ್ತು ಮಾರಲು ದನದ ಜಾತ್ರೆಗಳನ್ನೇ ಅವಲಂಬಿಸಿರುತ್ತಾರೆ. ಆದರೆ ಈ ಜಾತ್ರೆ ಆಯೋಜನೆ ಮಾಡೋ ನಗರಾಡಳಿತದ ಬೇಜವಾಬ್ದಾರಿಗೆ ರೈತರು ಬೇಸತ್ತು ಹೋಗೋ ಹಾಗೆ ಆಗಿದೆ. ಹಾಗಾದ್ರೆ ಇಂತಹದ್ದೊಂದು ಅವ್ಯವಸ್ಥೆ ಆಗಿರೋದೆಲ್ಲಿ. ರೈತರು ಅನುಭವಿಸುತ್ತಿರೋ ಕಷ್ಟಗಳಾದ್ರು ಏನು ಇಲ್ಲಿದೆ ಡೀಟೈಲ್ಸ್.
ಹೌದು, ಹಾಸನ ನಗರದ ನಗರಸಭೆ ಹಿಂಭಾಗದ ಮೈದಾನದಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ಆಯೋಜನೆ ಗೊಂಡಿದೆ. ಹಾಸನದ ದನದ ಜಾತ್ರೆ ಎಂದ್ರೆ ಇಡೀ ರಾಜ್ಯದಲ್ಲೇ ಹೆಸರುವಾಸಿ. ಆದ್ರೆ ಈ ಬಾರಿಯ ಜಾತ್ರೆ ಕಳೆದ ಮಂಗಳವಾರದಿಂದ ಪ್ರಾರಂಭವಾಗಿದ್ದು ಅವ್ಯವಸ್ಥೆಗಳ ಆಗರವಾಗಿದೆ. ಮೂಲ ಸೌಕರ್ಯ ಇಲ್ಲದೆ ಎತ್ತುಗಳು ಸೋರಗುತ್ತಿವೆ. ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಜೋಡೆತ್ತುಗಳನ್ನ ರೈತರು ವ್ಯಾಪಾರಕ್ಕಾಗಿ ತಂದಿದ್ದು ಒಂದು ಜೋಡಿ ಎತ್ತುಗಳು ಸುಮಾರು ಲಕ್ಷಾಂತರ ರೂಗಳಿಗೆ ಮಾರಾಟವಾಗ್ತಿವೆ. ಹಿಂದೆ ಹಾಸನದ ದನದ ಜಾತ್ರೆ ಅಂದ್ರೆ ಅದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದುಂಟು, ಆದ್ರೆ ಈಗ ದನದ ಜಾತ್ರೆ ನಡೆಯೋ ಜಾಗದಲ್ಲಿ ರಾಸುಗಳಿಗೆ ನೆರಳಿನ ಮತ್ತು ಇನ್ನಷ್ಟು ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಡುತ್ತಿದೆ.
ಅಲ್ಲದೆ ಈಗ ಜಾತ್ರೆ ನಡೆಯುತ್ತಿರೋ ಜಾಗ ಸಮತಟ್ಟು ಇಲ್ಲದೆ ರೈತರೇ ಜೆಸಿಬಿ ತರಿಸಿ ನೆಲವನ್ನ ಸಮತಟ್ಟುಮಾಡಿಕೊಡಿದ್ದಾರೆ. ಈ ಬಗ್ಗೆ ಹಾಸನ ನಗರ ಸಭೆ ಗಮನ ನೀಡಿದ್ರೆ ಈ ದನದ ಜಾತ್ರೆ ಇನ್ನಷ್ಟು ಶ್ರೀಮಂತಿಕೆಯಿಂದ ನಡೆಸಬಹುದು. ಬೇರೆ ಕಡೆ ನಡೆಯೋ ದನದ ಜಾತ್ರಗಳನ್ನು ತುಂಬಾ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಅಲ್ಲದೆ ರೈತರಿಗೆ ಪ್ರೋತ್ಸಾಹ ನೀಡುವಂತೆ ಉತ್ತಮರಾಸುಗಳಿಗೆ ಬಹುಮಾನ ವಿತರಣೆ ಸೇರಿದಂತೆ ರಾಸುಗಳ ಮರೆವಣಿಗೆ ಮಾಡುತ್ತಾರೆ. ಇದು ಜಾನುವಾರುಗಳನ್ನು ಸಾಕಿದ ರೈತರಿಗೆ ಉತ್ತೇಜನ ಸಿಗುತ್ತದೆ ಆದ್ರೆ ಹಾಸನದಲ್ಲಿ ಅವ್ಯವಸ್ಥೆ ಆಗರವಾಗಿದ್ದು ಸ್ಥಳೀಯ ಜನಪ್ರತಿನಿಧಿಗಳು ರೈತರನ್ನ ಪ್ರೋತ್ಸಾಹಿಸುವ ಮನಸ್ಸು ಮಾಡಬೇಕು ಎನ್ನುತ್ತಿದ್ದಾರೆ ರೈತರುಗಳು.
ಒಟ್ಟಾರೆ ಹಾಸನದ ಐತಿಹಾಸಿಕ ದನಗಳ ಜಾತ್ರೆಗೆ ಬಂದಿರೋ ರೈತರು ಅನೇಕ ಸಮಸ್ಯೆಗಳನ್ನು ಅನುಭಸುತ್ತಿದ್ದರೂ ಕೂಡ ನಗರಸಭೆ ಅಧಿಕಾರಿಗಳು ನಾಮಕಾವಸ್ತೆಗೆ ಪ್ರತೀವರ್ಷ ದನದ ಜಾತ್ರೆ ಆಯೋಜನೆ ಮಾಡಿ ಕೈ ತೊಳೆದುಕೊಂಡಿರೋದು ಸಾಭೀತಾದಂತಾಗಿದೆ. ಅಲ್ಲದೇ ಮಾತು ಬಾರದ ಮೂಕ ಪ್ರಾಣಿಯಾದ ಎತ್ತುಗಳು ಕಡು ಬಿಸಿಲ ಬೇಗೆಯ ನೋವು ತಾಳಲಾರದೆ ಮೂಕ ಆಕ್ರಂದನ ಪಡುತ್ತಿವೆ.
ಪ್ರತಾಪ್ ಹಿರೀಸಾವೆ, ಪವರ್ ಟಿವಿ ಹಾಸನ
zithromax 250 mg tablets
buy zithromax 250 mg online
1presage