Home ರಾಜ್ಯ ವಿವಾದಿತ ಮುನೇಶ್ವರ ಬೆಟ್ಟದಲ್ಲಿ ಧಾರ್ಮಿಕ ಸಭೆಗೆ ತೀರ್ಮಾನ- ಸಭೆ ವಿರೋಧಿಸಿ ಹಿಂಜಾವೇ ಡಿಸಿ, ಎಸ್ಪಿಗೆ ಮನವಿ

ವಿವಾದಿತ ಮುನೇಶ್ವರ ಬೆಟ್ಟದಲ್ಲಿ ಧಾರ್ಮಿಕ ಸಭೆಗೆ ತೀರ್ಮಾನ- ಸಭೆ ವಿರೋಧಿಸಿ ಹಿಂಜಾವೇ ಡಿಸಿ, ಎಸ್ಪಿಗೆ ಮನವಿ

ಕನಕಪುರ : ಮುನೇಶ್ವರ ಬೆಟ್ಟದಲ್ಲಿ ನಾಳೆ ಕ್ರಿಶ್ಚಿಯನ್ ಸಮುದಾಯದವರು ನಾಳೆ ನಡೆಸಲು ಉದ್ದೇಶಿಸಿರುವ ಧಾರ್ಮಿಕ ಸಭೆ, ಹಾಗೂ ಅಕ್ರಮವಾಗಿ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ತಡೆಯಬೇಕೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಇಂದು ಮನವಿ ಸಲ್ಲಿಸಿದರು. ಕನಕಪುರ ತಾಲ್ಲೂಕಿನ ಹಾರೊಬೆಲೆ ಗ್ರಾಮದಲ್ಲಿರುವ ಮುನೇಶ್ವರ ಬೆಟ್ಟದ ಜಾಗದ ವಿಚಾರ ಇದೀಗ ಸರ್ಕಾರದ ಹಂತದಲ್ಲಿ ವಿವಾದಿತ ಬೆಟ್ಟದ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಜೊತೆಗೆ ಇಡೀ ರಾಜ್ಯದಲ್ಲಿ ಕರೋನ ಆರ್ಭಟ ಹೆಚ್ಚಾಗ್ತಿದೆ ಕನಕಪುರ ತಾಲ್ಲೂಕು ಸ್ವಯಂಪ್ರೇರಿತ ಲಾಕ್ ಡೌನ್ ಆಗಿದೆ. ಈ ಸಂಧರ್ಭದಲ್ಲಿ ಬೆಟ್ಟದಲ್ಲಿ ಧಾರ್ಮಿಕ ಸಭೆ ನಡೆಸಲು ಕ್ರಿಶ್ಚಿಯನ್ ಸಮುದಾಯದವರು ತೀರ್ಮಾನಿಸಿರುವುದರಿಂದ ಈ ಸಭೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಒಪ್ಪಿಗೆ ನೀಡಬಾರದು. ಸಭೆ ನಡೆಸಲು ಒಪ್ಪಿಗೆ ನೀಡಿದ್ದೆ ಆದರೆ ಹಿಂದೂ ಜಾಗರಣ ವೇದಿಕೆ ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಡಿ. ಕೆ ಶಿವಕುಮಾರ್ ಗೆ ಅಧಿಕಾರ ಹಸ್ತಾಂತರ ಮಾಡಿದ ದಿನೇಶ್ ಗುಂಡೂರಾವ್

ಬೆಂಗಳೂರು :  ಡಿ. ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಿ. ಕೆ ಶಿವಕುಮಾರ್ ತಾಯಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಹಾಗೆಯೇ...

ಕೊಲೆ ಆರೋಪಿಗೆ ಕೊರೋನಾ ದೃಢ | ಇನ್ಸ್ ಪೆಕ್ಟರ್ ಸೇರಿ 15 ಪೊಲೀಸರಿಗೆ ಕ್ವಾರಂಟೈನ್

ಹುಬ್ಬಳ್ಳಿ : ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಂಡಿವಾಡ ಕ್ರಾಸ್ ಬಳಿ ಪತ್ನಿ ಶಾರವ್ವ ಎಂಬಾಕೆಯನ್ನು ಕೊಲೆ ಮಾಡಿದ್ದ....

ಡಿಕೆಶಿವಕುಮಾರ್ ಗೆ ಇಂದು ಪಟ್ಟಾಭಿಷೇಕ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ  ಡಿ.ಕೆ ಶಿವಕುಮಾರ್ ಇಂದು ಪ್ರತಿಜ್ಞೆ ಮಾಡಲಿದ್ದಾರೆ. ಡಿಕೆಶಿ ಪದಗ್ರಹಣಕ್ಕೆ ಎರಡು ಬಾರಿ ಡೇಟ್ ಫಿಕ್ಸ್​ ಆಗಿ ಕ್ಯಾನ್ಸಲ್ ಆಗಿತ್ತು.  ಇಂದು ಅಂತಿಮವಾಗಿ ಕೆಪಿಸಿಸಿ ಕಚೇರಿಯಲ್ಲಿ 11 ಗಂಟೆಗೆ...

ಕಾಡಾನೆಗಳನ್ನು ಸ್ಥಳಾಂತರಿಸಿ ರೈತರ ಬೆಳೆ ಹಾನಿಗೆ ಪರಿಹಾರ ನೀಡಿ: ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಜೀವ ಹಾನಿ ಹಾಗೂ ಬೆಳೆ ನಾಶವಾಗುತ್ತಿರುವ ಹಿನ್ನಲೆಯಲ್ಲಿ ಅವುಗಳನ್ನು ಸ್ಥಳಾಂತರಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಲೂರು ಹಾಗೂ ಸಕಲೇಶಪುರ ಕ್ಷೇತ್ರದ...