Monday, August 15, 2022
Powertv Logo
Homeದೇಶ‘ನಾಳೆ ದೇಶಾದ್ಯಂತ ಹೆದ್ದಾರಿ ಬಂದ್’

‘ನಾಳೆ ದೇಶಾದ್ಯಂತ ಹೆದ್ದಾರಿ ಬಂದ್’

ಬೆಂಗಳೂರು: ನಾಳೆ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೆದ್ದಾರಿ ತಡೆಯುವ ‘ಚಕ್ಕಾ ಜಾಮ್’ ಹೋರಾಟ ನಡೆಸಲಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ನಾಳೆ ದೇಶಾದ್ಯಂತ 12 ಗಮಟೆಯಿಂದ 3 ಗಂಟೆವರೆಗೂ ಪ್ರಮುಖ ಹೆದ್ದಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ರೈತರ ಬೃಹತ್ ‘ಚಕ್ಕಾ ಜಾಮ್ ‘ ಹೋರಾಟಕ್ಕೆ ರಾಜ್ಯ ರೈತರ ಸಂಘ ಸಾಥ್ ನೀಡಿದೆ. ನಾಳೆ ರೈತರ ರಣಕಹಳೆಗೆ ಹೆದ್ದಾರಿಗಳು ಕಂಪ್ಲೀಟ್ ಬಂದ್ ಆಗಲಿವೆ.

ಕೇಂದ್ರದ ವಿರುದ್ಧ ಮತ್ತೆ ಅನ್ನದಾತರು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಸತತ ಮೂರು ಗಂಟೆಗಳವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಸಂಯುಕ್ತ ಹೋರಾಟ ಸಮಿತಿಯಿಂದ ರಾಜ್ಯ ರಾಷ್ಟ್ರಿಯ ಹೆದ್ದಾರಿಯನ್ನು ಬಂದ್ ಮಾಡಲಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ 500 ರೈತರು ದೆಹಲಿಯನ್ನು ತಲುಪಲಿದ್ದಾರೆ.

ರಾಜ್ಯದಲ್ಲಿ ವಿವಿಧ ರೈತ ಸಂಘಟನೆಗಳಿಂದ ಚಕ್ಕಾ ಜಾಮ್ ಹೋರಾಟ ನಡೆಯಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಯಲಿದೆ. ಬೆಂಗಳೂರು-ದೊಡ್ಡಬಳ್ಳಾಪುರ ರೋಡ್ ನಲ್ಲಿ  ಶಾಂತಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬೆಂಗಳೂರು-ಮೈಸೂರು, ಬಿಡದಿ-ಮಂಡ್ಯ ಬಳಿ ರಸ್ತೆ ತಡೆಯಲಿದ್ದಾರೆ. ಚಾಮರಸಮಾಲೀ  ಪಾಟೀಲ್ ನೇತೃತ್ವದಲ್ಲಿ ರಾಯಚೂರು ಅಸ್ಕಿಹಾಲ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ.

ಎಲ್ಲೆಲ್ಲಿ ಹೆದ್ದಾರಿ ಬಂದ್?​

  • ಬೆಂಗಳೂರು ಟೂ ಗೋವಾ ರಾಷ್ಟ್ರೀಯ ಹೆದ್ದಾರಿ
  • ಬೆಂಗಳೂರು ಟೂ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ
  • ಪೂನಾ ಟೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
  • ಬೆಂಗಳೂರು ಟೂ ಚೆನ್ನೈ ರಾಷ್ಟ್ರೀಯ ಹೆದ್ದಾರಿ
  • ಬೆಂಗಳೂರು ಟೂ ಮೈಸೂರು ರಾಜ್ಯ ಹೆದ್ದಾರಿ
  • ಬೆಂಗಳೂರು ಟೂ ಚಾಮರಾಜನಗರ ರಾಜ್ಯ ಹೆದ್ದಾರಿ
  • ಬೆಂಗಳೂರು ಟೂ ಮಾಗಡಿ ರೋಡ್ ರಾಜ್ಯ ಹೆದ್ದಾರಿ
  • ಬೆಂಗಳೂರು ಟೂ ಶಿವಮೊಗ್ಗ ರಾಜ್ಯ ಹೆದ್ದಾರಿ
  • ಬೆಂಗಳೂರು ಟೂ ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ

 

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments