Home ರಾಜ್ಯ ಸಿಎಂ ವಾಸ್ತವ್ಯವಿರೋ ರೆಸಾರ್ಟ್​ನ 8 ಸ್ಥಳೀಯ ಸಿಬ್ಬಂದಿಗೆ ಕಡ್ಡಾಯ ರಜೆ..!

ಸಿಎಂ ವಾಸ್ತವ್ಯವಿರೋ ರೆಸಾರ್ಟ್​ನ 8 ಸ್ಥಳೀಯ ಸಿಬ್ಬಂದಿಗೆ ಕಡ್ಡಾಯ ರಜೆ..!

ಮಡಿಕೇರಿ: ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿರೋ ಇಬ್ಬನಿ ರೆಸಾರ್ಟ್​ನ 8 ಮಂದಿ ಸ್ಥಳೀಯ ಸಿಬ್ಬಂದಿಗೆ ಕಡ್ಡಾಯ ರಜೆ ನೀಡಲಾಗಿದೆ. ನಿನ್ನೆ ಸಂಜೆ ಸಿಎಂ ಇಬ್ಬನಿ ರೆಸಾರ್ಟ್​ಗೆ ಬಂದಿದ್ದರು. ಸಿಎಂ ವಾಸ್ತವ್ಯ ಮಾಡಿರೋ ರೆಸಾರ್ಟ್‍ನಲ್ಲಿ ಒಟ್ಟು 6 ಕಾಟೇಜ್ ಬುಕಿಂಗ್ ಮಾಡಲಾಗಿದ್ದು ಒಂದು ಸಂಪೂರ್ಣ ಖಾಸಗಿ ಕಾಟೇಜ್ ಬುಕ್​ ಮಾಡಲಾಗಿದೆ.

‘ಪಾಯಿಂಟ್ ಸೆಟ್ಟಾ’ ಹೆಸರಿನ ಖಾಸಗಿ ಕಾಟೇಜ್ ಬುಕ್​ ಮಾಡಲಾಗಿದ್ದು, ದಿನಕ್ಕೆ 80,000 ರೂ. ಬಾಡಿಗೆ ಇದೆ. ‘ಪಾಯಿಂಟ್ ಸೆಟ್ಟಾ’ದ ಸುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಇದ್ದು, ಗರಿಷ್ಠ ಖಾಸಗಿತನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಬ್ಬನಿ ರೆಸಾರ್ಟ್‍ನ 8 ಸ್ಥಳೀಯ ಸಿಬ್ಬಂದಿಗೆ 3 ದಿನ ಕಡ್ಡಾಯ ರಜೆಯನ್ನೂ ನೀಡಲಾಗಿದೆ. ಕೇವಲ ಉತ್ತರ ಭಾರತ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದು, ಬೆಂಗಳೂರಿನಿಂದ ಉನ್ನತ ದರ್ಜೆಯ 8 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗೆ ಖಾಸಗಿ ಗೇಟ್‍ನತ್ತ ತೆರಳದಂತೆ ನಿರ್ಬಂಧ ಹೇರಲಾಗಿದ್ದು, ಎಲ್ಲಾ ಸಿಬ್ಬಂದಿಗೆ ಮೊಬೈಲ್ ಬಳಕೆ ನಿರ್ಬಂಧಿಸಲಾಗಿದೆ. ರೆಸಾರ್ಟ್ ಒಳಗಡೆ ಮೊಬೈಲ್ ಜಾಮರ್ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments