Home ರಾಜ್ಯ ದಸರಾ ಹೈ ಪವರ್ ಸಭೆಯತ್ತ ಎಲ್ಲರ ಚಿತ್ತ..!

ದಸರಾ ಹೈ ಪವರ್ ಸಭೆಯತ್ತ ಎಲ್ಲರ ಚಿತ್ತ..!

ಮೈಸೂರು: ಕೊರೋನಾ ನಿಯಂತ್ರಣದಲ್ಲೇ ಸರ್ಕಾರ ಮುಳುಗಿರುವ ಸಂಧರ್ಭದಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ ದಾಪುಗಾಲು ಹಾಕುತ್ತಾ ಬರುತ್ತಿದೆ. ಅದ್ದೂರಿ ದಸರಾಗೆ ಬ್ರೇಕ್ ಹಾಕುವ ಸೂಚನೆ ನೀಡಿರುವ ಸರ್ಕಾರ ಇನ್ನೂ ರೂಪುರೇಷೆಗಳನ್ನ ಪ್ರಕಟಿಸುವಲ್ಲಿ ವಿಳಂಬ ಮಾಡುತ್ತಿದೆ. ಸಾಂಪ್ರದಾಯಿಕ ದಸರಾ ಎಂದೇ ಹೇಳುತ್ತಿರುವ ಮಧ್ಯೆ ಅರಮನೆಯಲ್ಲಿ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ.

ದಸರಾಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಈ ವೇಳೆಗೆ ಗಜಪಯಣ ಆರಂಭವಾಗಿ ಆನೆಗಳು ಮೈಸೂರು ತಲುಪಬೇಕಿತ್ತು. ಅರಮನೆಯಲ್ಲಿ ಗಜಪಡೆ ಬೀಡುಬಿಟ್ಟು ತಾಲೀಮಿನಲ್ಲಿ ಮುಳುಗಬೇಕಿತ್ತು. ಆದ್ರೆ ಕೊರೋನಾ ಎಫೆಕ್ಟ್ ಆನೆಗಳ ಆಗಮನದ ಸೂಚನೆಗಳೇ ಕಾಣುತ್ತಿಲ್ಲ. ದಸರಾ ಸಿದ್ದತೆ ಬಗ್ಗೆ ಇನ್ನೂ ರೂಪುರೇಷೆಗಳೇ ಸಿದ್ದವಾಗಿಲ್ಲ. ಕೇವಲ ಒಂದೂವರೆ ತಿಂಗಳು ಬಾಕಿ ಇದ್ದರೂ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಸರಳ ಹಾಗೂ ಸಾಂಪ್ರದಾಯಿಕ ದಸರಾ ಎಂದು ಹೇಳಲಾಗುತ್ತಿದ್ದರೂ ದಸರಾ ಹೈಪವರ್ ಮೀಟಿಂಗ್ ನತ್ತ ಎಲ್ಲರ ಚಿತ್ತ ಹರಿದಿದೆ. ಮುಖ್ಯಮಂತ್ರಿಗಳು ಮೈಸೂರಿನಲ್ಲೇ ಉನ್ನತಮಟ್ಟದ ಸಭೆ ನಡೆಸಲು ಉದ್ದೇಶಿಸಿದ್ದಾರೆ. ಉನ್ನತ ಮಟ್ಟದ ಸಭೆಯೂ ಮುಂದಿನ ವಾರ ನಡೆಯಲಿದೆ. ಇವೆಲ್ಲಾ ಬೆಳವಣಿಗೆ ಗಮನಿಸಿದ್ರೆ ಆನೆಗಳು ಈ ಬಾರಿಡೌಟು ಎಂದೇ ಹೇಳಲಾಗುತ್ತಿದೆ. ಎಲ್ಲಾ ಪ್ರಶ್ನೆಗಳಿಗೂ ಹೈ ಪವರ್ ಮೀಟಿಂಗ್ ನತ್ತಲೇ ಬೊಟ್ಟುಮಾಡಿ ತೋರಿಸಲಾಗುತ್ತಿದೆ.

ದಸರಾಗೆ ಜಿಲ್ಲಾಡಳಿತವಂತೂ ಸಿದ್ದತೆ ಮಾಡಿಕೊಂಡಿಲ್ಲ. ಆದ್ರೆ ಅರಮನೆಯಲ್ಲಿ ಸಿದ್ದತೆಯ ಸದ್ದಿಲ್ಲದೇ ಸಾಗುತ್ತಿದೆ. ಅರಮನೆಯ ಮುಖ್ಯ ಧ್ವಾರಕ್ಕೆ ಬಣ್ಣ ಹೊಡೆಯುವ ಕಾರ್ಯ ಆರಂಭವಾಗಿದೆ. ಅರಮನೆ ಆಡಳಿತ ಮಂಡಳಿಯಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಪೈಂಟಿಂಗ್ ಕೆಲಸಗಳೂ ಮುಗಿಯುವ ಹಂತ ತಲುಪಿದೆ. ಕೆಟ್ಟು ನಿಂತ ಬಲ್ಪ್ ಗಳ ಬದಲಾವಣೆ ಕಾರ್ಯಗಳೂ ನಡೆಯುತ್ತಿದೆ.

ಒಟ್ಟಾರೆ ಕೊರೋನಾ ದಸರಾ ಸಂಭ್ರಮವನ್ನ ಕಸಿದುಕೊಳ್ಳುವ ಸೂಚನೆ ನೀಡಿದೆ. ಲಕ್ಷಾಂತರ ಮಂದಿ ವೀಕ್ಷಿಸುವ ಜಂಬೂಸವಾರಿಗೆ ಈ ವರ್ಷ ಕೊಕ್ ಎಂದೇ ಹೇಳಲಾಗುತ್ತಿದೆ. ಆನೆಗಳಿಲ್ಲದ ದಸರಾ ನಡೆಯುವ ಸಂಭವವೇ ಹೆಚ್ಚಾಗಿ ಕಾಣುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments