Home ರಾಜ್ಯ ಬೆಂಗಳೂರು ಸಿಲಿಕಾನ್​ ಸಿಟಿಯಲ್ಲಿ ಸುಗಂಧ ಸೂಸುವ ಅತ್ತರ್​ಗೆ ಫುಲ್​ ಡಿಮ್ಯಾಂಡ್​..!

ಸಿಲಿಕಾನ್​ ಸಿಟಿಯಲ್ಲಿ ಸುಗಂಧ ಸೂಸುವ ಅತ್ತರ್​ಗೆ ಫುಲ್​ ಡಿಮ್ಯಾಂಡ್​..!

ಬೆಂಗಳೂರು: ಈಗಾಗಲೇ ರಂಜಾನ್ ಮಾಸ ಶುರುವಾಗಿದೆ. ಮುಸ್ಲಿಂ ಬಾಂಧವರು ಉಪವಾಸ, ನಮಾಜ್​, ಇಫ್ತಾರ್​​ ಕೂಟಗಳಲ್ಲಿ ಬ್ಯುಸಿಯಾಗಿದ್ದಾರೆ. ಇದ್ರ ಮಧ್ಯೆ ಮಾರುಕಟ್ಟೆಗೆ ವಿಭಿನ್ನ ಅತ್ತರ್ ಲಗ್ಗೆ ಇಟ್ಟಿವೆ. ಇದಕ್ಕೆ ಸಖತ್​ ಡಿಮ್ಯಾಂಡ್​ ಶುರುವಾಗಿದೆ. ನಿತ್ಯ ಗ್ರಾಹಕರ ದಂಡೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ವ್ಯಾಪಾರ– ವಹಿವಾಟುಗಳು ಜೋರಾಗಿ ನಡೆಯುತ್ತಿದೆ. ಒಂದೆಡೆ ಸ್ವಾದಿಷ್ಟ ಖಾದ್ಯಗಳ ಸ್ವಾದ ತೇಲಿ ಬರುತ್ತಿದ್ದರೆ, ಇನ್ನೊಂದೆಡೆ ಪರಿಮಳ ಸೂಸುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿವೆ.

ರಂಜಾನ್ ಪ್ರಯುಕ್ತ ಮಾರುಕಟ್ಟೆಗೆ ವಿಶೇಷ ಮೆರುಗು ಬಂದಿದೆ. ಸುವಾಸನೆಯ ಘಮ ಬೀರುವ ಅತ್ತರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಮುಖ್ಯವಾಗಿ ಹಬ್ಬಕ್ಕೆ ಅಂತಾನೇ ಮಾರುಕಟ್ಟೆಗೆ ಬಂದಿರೋ ವಿಶೇಷ ಅತ್ತರ್ ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇನ್ನೂ ವಿಶೇಷವಾಗಿ ಜನ್ನತ್‌–ಉಲ್‌–ಫಿರ್ದೋಸ್‌, ಮೋಗ್ರಾ, ಸುರ್ಮಾ, ಅಸಿಲ್‌, ಮಜು ಮಾ ಅತ್ತರ್‌ ಉತ್ಪನ್ನಗಳು ಸುಗಂಧ ಭರಿತ ಸುವಾಸನೆ ಸೂಸುವ ಮೂಲಕ ಗ್ರಾಹಕರನ್ನು ಅಟ್ರಾಕ್ಟ್ ಮಾಡ್ತಿದೆ.

ಫಿರ್ದೋಸ್, ಮಜುಮಾ, ವೈಟ್ ಮಸ್ಕ್, ಸ್ಯಾಂಡಲ್, ಫ್ಯಾನ್ಸಿ, ಡೋವ್  ಹೀಗೆ ವೈರೆಟಿ ಹೆಸರಿನ ಅತ್ತರ್​​ಗಳು ಗ್ರಾಹಕರನ್ನು ಸೆಳೆಯುತ್ತಿದೆ. ಬಡವರೇ ಇರಲಿ. ಶ್ರೀಮಂತರೇ ಇರಲಿ ಅತ್ತರ್ ಇಲ್ಲದೇ ಹಬ್ಬದ ಆಚರಣೆಯೇ ಇಲ್ಲವಂತೆ . ಎಲ್ಲರೂ ತಪ್ಪದೇ ತಮ್ಮ ಶಕ್ತ್ಯಾನುಸಾರ ಅತ್ತರ್ ಖರೀದಿಸುತ್ತಾರೆ.

ಈ ಅತ್ತರ್​​​​ಗಳಿಗೆ ದೇಶ ವಿದೇಶಿಗರು ಕೂಡ ಮನಸೋತಿದ್ದಾರೆ. 150 ರೂಪಾಯಿಂದ ನಿಂದ 8 ಸಾವಿರ ರುಪಾಯಿವರೆಗೂ ಅತ್ತರ್​​ಗಳು ಸಿಗುತ್ತವೆ. ಸಾಮಾನ್ಯವಾಗಿ ಪರ್ಫ್ಯೂಮ್ ಗಳನ್ನ ಎಲ್ಲರೂ ಬಳಸ್ತಾರೆ. ಆದ್ರೆ ಮುಸ್ಲಿಮರು ಹೆಚ್ಚಾಗಿ ಬಳಸೋದು ನಾನ್ ಆಲ್ಕೋಹಾಲಿಕ್ ಆಗಿರೋ, ಅತ್ತರ್​ಗಳನ್ನು. ಒಟ್ಟಿನಲ್ಲಿ ವರ್ಷದುದ್ದಕ್ಕೂ ಸಿಗದ, ಹಾಗೂ  ಕಾಣದ ತರಹೇವಾರು ಅತ್ತರ್ ಮಾರುಕಟ್ಟೆಗೆ ಬಂದಿದೆ. ಅತ್ತರ್​​​​​​ಗಳ ಘಮ ನಗರದೆಲ್ಲೆಡೆ ಹರಡಿದೆ.

– ಸ್ವಾತಿ ಪುಲಗಂಟಿ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments