ಚಿಕ್ಕಮಗಳೂರು : ವಾರಸ್ದಾರ ಧಾರವಾಹಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಸುದೀಪ್ ಮತ್ತು ಕಿಚ್ಚ ಕ್ರಿಯೇಷನ್ಸ್ ವಿರುದ್ಧದ ಕೇಸನ್ನು ಹೈಕೋರ್ಟ್ ವಜಾಗೊಳಿಸಿದೆ.
2014ರಲ್ಲಿ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ದೀಪಕ್ ಮಯೂರ್ ಪಟೇಲ್ ಮನೆಯಲ್ಲಿ ವಾರಸ್ದಾರ ಧಾರವಾಹಿ ಚಿತ್ರೀಕರಣ ನಡೆದಿತ್ತು. ಆದರೆ ಶೂಟಿಂಗ್ ನಂತ್ರ ಬಾಡಿಗೆ ಬಾಕಿ ಹಣವನ್ನು ಕಿಚ್ಚ ಕ್ರಿಯೇಷನ್ ನೀಡಿಲ್ಲ. ಅದಲ್ಲದೆ ಕಾಫಿ ತೋಟ ಮತ್ತು ಅಡಿಕೆ ಮರಗಳನ್ನು ನಾಶ ಮಾಡಿದ್ದಾರೆ. ಆ ನಷ್ಟದ ಹಣವನ್ನು ಭರಿಸಬೇಕೆಂದು ಮಾಲೀಕ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಿಕ್ಕಮಗಳೂರು 2ನೇ ಜಿಲ್ಲಾ ಸತ್ರ ನ್ಯಾಯಾಲಯ ಸುದೀಪ್ಗೆ ವಾರೆಂಟ್ ಜಾರಿ ಮಾಡಿತ್ತು. ಸುದೀಪ್ ಈ ಕುರಿತ ಮೂರೂ ವಾರೆಂಟ್ಗಳಿಗೂ ಉತ್ತರಿಸಿರಲಿಲ್ಲ.
ಸುದೀಪ್ ಪರ ವಕೀಲ ಪ್ರಕರಣವನ್ನು ಹೈಕೋರ್ಟ್ಗೆ ತೆಗೆದುಕೊಂಡು ಹೋಗಿದ್ದರು. ಪ್ರಕರಣ ಕೈಗೆತ್ತುಕೊಂಡ ಕೋರ್ಟ್ ಸುದೀಪ್ ಅವರ ವಿರುದ್ಧದ ಕೇಸನ್ನು ಖುಲಾಸೆ ಮಾಡಿದ್ದು, ಸುದೀಪ್ಗೆ ರಿಲೀಫ್ ಸಿಕ್ಕಿದೆ.
‘ವಾರಸ್ದಾರ’ ಕೇಸ್ನಿಂದ ಕಿಚ್ಚ ಸುದೀಪ್ಗೆ ಬಿಗ್ ರಿಲೀಫ್..!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on