ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಾಜಿಬಿಳಗಿ ಗ್ರಾಮದ ಬಡ ವಿದ್ಯಾರ್ಥಿ ಸಾಧನೆಗೆ ಸುಧಾಮೂರ್ತಿಯವರು ಸಂತೋಷ ವ್ಯಕ್ತಪಡಿಸಿದ್ದಲ್ಲದೆ, ಪ್ರತಿವರ್ಷ 50 ಸಾವಿರ ರೂ 3 ವರ್ಷಗಳ ಕಾಲ ಸಹಾಯ ನೀಡಲು ಮುಂದೆ ಬಂದಿದ್ದಾರೆ.
ಕಾಜಿಬಿಳಗಿ ಗ್ರಾಮದ ಬಡ ಕುಟುಂಬದ ಎಸ್ಎಸ್ಎಲ್ಸಿ(SSLC) ವಿದ್ಯಾರ್ಥಿ ಸಂಜು ಬಿರಾದರ್ 617 ಅಂಕ 98.72% ಪಡೆದು ರಾಜ್ಯಕ್ಕೆ 7 ನೇ ರ್ಯಾಂಕ್ ಬಂದಿದ್ದಾನೆ. ವಿದ್ಯಾರ್ಥಿ ಕುಟುಂಬದ ಬಡತನ ಅರಿತ ಸುಧಾಮೂರ್ತಿಯವರು ಸಹಾಯ ಹಸ್ತಕ್ಕೆ ಮುಂದಾಗಿದ್ದಾರೆ. ಇದಕ್ಕೆ ಅಭಿನಂಧಿಸಿ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿ ಸಂಜು ಬಿರಾದರ ಹಾಗೂ ಅವರ ಕುಟುಂಬ ಸುಧಾಮೂರ್ತಿಯವರ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.