Home ರಾಜ್ಯ ಯಾದಗಿರಿ ದಂಪತಿಗೆ ನೆರವಾದ ಬಾಲಿವುಡ್ ನಟ ಸೋನು ಸೂದ್..!

ಯಾದಗಿರಿ ದಂಪತಿಗೆ ನೆರವಾದ ಬಾಲಿವುಡ್ ನಟ ಸೋನು ಸೂದ್..!

ಯಾದಗಿರಿ: ಸೋನು ಸೂದ್ .. ಈ ನಟನ ಹೆಸರು ಕೇಳಿದ್ರೆ ಸಾಕು‌‌. ಇಡೀ ಬಾಲಿವುಡ್ ತಲೆ ಬಾಗುತ್ತೆ. ಯಾಕಂದ್ರೆ ಈ ನಟ ಕೇವಲ ಸಿನಿ ಪರದೆ ಮೇಲೆ ಮಿಂಚಿದ್ದಲ್ಲದೇ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಇಡೀ ಭಾರತದ ತುಂಬೆಲ್ಲ ಮನೆ ಮಾತಾಗಿದ್ದಾರೆ. ಇದೀಗ ಇವರ ಸಮಾಜಮುಖಿ ಕೆಲಸಗಳು ಗಿರಿನಾಡು ಯಾದಗಿರಿ ಜಿಲ್ಲೆಗೂ ವಿಸ್ತರಿಸಿದೆ.

ಕಳೆದ ಮೂರು ದಿನಗಳ ಹಿಂದೆ ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದ ನಾಗರಾಜ್ ಮತ್ತು ಪದ್ಮ ದಂಪತಿ ಮುದ್ದಾದ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಸಿಜರಿನ್ ಮೂಲಕ ಹೆರಿಗೆಯಾದರು ಸಹ ತಾಯಿ ಮತ್ತು ಮೂರು ಮಕ್ಕಳು ಆರೋಗ್ಯಾವಾಗಿದ್ದಾರೆ. ಆದರೆ ಕಡುಬಡವರಾದ ನಾಗರಾಜ್ ಹಸುಗೂಸುಗಳ ಆರೈಕೆ ಮತ್ತು ಅವರ ಚಿಕಿತ್ಸೆಗೆ ಹಣ ಹೊಂದಿಸುವ ಚಿಂತೆ ಎದುರಾಗಿದ್ದಾಗ, ಅವರ ಸಹಾಯಕ್ಕೆ ಬಂದಿದ್ದು ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತ ಮಲ್ಲು ಹತ್ತಿಕೂಣಿ. ತಕ್ಷಣವೇ ಕಾರ್ಯಪ್ರವತರಾದ ಮಲ್ಲು ಹತ್ತಿಕೂಣಿ ನಾಗರಾಜ್ ದಂಪತಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸೋನು ಸೂದ್ ಅವರಿಗೆ ವಾಟ್ಸ್​ಆ್ಯಪ್​ ಮೂಲಕ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಪಂದಿಸಿದ ಸೋನು ಸೂದ್, ತಂಡದ ಮುಖ್ಯಸ್ಥ ಗೋವಿಂದ ಅಗರವಾಲ್ ಮೂಲಕ, ನಾಗರಾಜ್ ಕುಟುಂಬಕ್ಕೆ ಎರಡು ತಿಂಗಳಿಗೆ ಆಗವಷ್ಟು ಆಹಾರ ಸಾಮಾಗ್ರಿಗಳನ್ನ ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು ಅಂತ ಪ್ರತಿಕ್ರಿಯಿಸಿದ್ದಾರೆ. 

ಜೊತೆಗೆ ಮಕ್ಕಳ ಚಿಕಿತ್ಸೆಗೆ ಬೇಕಾಗುವ ಆರ್ಥಿಕ ಸಹಾಯ ಮತ್ತು ಕುಟುಂಬ ನಿರ್ವಹಣೆಗೆ ಸಹಾಯ ಮಾಡುವುದಾಗಿ ಸೋನುಸೂದ್ ಭರವಸೆ ನೀಡಿದ್ದಾರೆ. ಸದ್ಯ ಏಕಕಾಲಕ್ಕೆ ಮೂವರು ಗಂಡು ಮಕ್ಕಳ ಜನ್ಮ ನೀಡಿದ್ದ ದಂಪತಿ ಆಕಾಶವೇ ಕಳಚಿ ಬಿದ್ದಂಥಾ ಸ್ಥಿತಿಯಲ್ಲಿದ್ದಾಗ, ಸೋನುಸೂದ್ ಸಹಾಯದ ಹಸ್ತ ನೀಡಿ ತಮ್ಮ ಹೃದಯ ವೈಶಾಲತೆಯನ್ನ ದೂರದ ಯಾದಗಿರಿಗೂ ವಿಸ್ತರಿಸಿದ್ದಾರೆ. ಕೊರೋನಾ ಆರ್ಭಟದಿಂದ ಮುಂಬೈನಲ್ಲಿ ಸಿಲುಕಿದ್ದ ಸಾವಿರಾರು ಜನರನ್ನ ಸ್ವತಃ ಖರ್ಚಿನಲ್ಲಿ ಅವರವರ ಊರುಗಳಿಗೆ ತೆರಳಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದ ಸೋನುಸೂದ್, ಇದೀಗ ಹಮ್ ಆಪ್ ಕೇ ಸಾಥ್ ಹೈ ಅಂತಾ ಭರವಸೆ ನೀಡಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗ್ತಿದೆ.

-ಅನಿಲ್‌ಸ್ವಾಮಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments