ಮೈಸೂರು: ಮತದಾರರ ಋಣ ತೀರಿಸಲು ಜನಪ್ರತಿನಿಧಿಗಳಿಗೆ ಸಾಕಷ್ಟು ಅವಕಾಶಗಳಿರುತ್ತೆ. ಅದನ್ನ ಸಮರ್ಪಕವಾಗಿ ಬಳಸಿಕೊಳ್ಳುವುದೇ ಜನಪ್ರತಿನಿಧಿಗಳ ಜಾಣ್ಮೆ. ಇಂತಹ ಒಂದು ಕೆಲಸದಲ್ಲಿ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮೆಚ್ಚುಗೆ ಪಡೆದಿದ್ದಾರೆ.ಚಮ್ಮಾರ ಕುಟುಂಬದ ಬಡಹುಡುಗನಿಗೆ ವಿದ್ಯಾದಾನಕ್ಕೆ ಒತ್ತು ನೀಡಿ ಶಹಭಾಷ್ ಎನಿಸಿಕೊಂಡಿದ್ದಾರೆ.
ಶಾಸಕ ರಾಮದಾಸ್ ರವರ ಮನಸ್ಸನ್ನ ಗೆದ್ದ ಬಾಲಕನ ಹೆಸರು ರಾಹುಲ್. ಮೈಸೂರಿನ ಟಿ.ಕೆ.ಲೇಔಟ್ ನ ತಂಗ ಹಾಗೂ ಶೋಭಾ ದಂಪತಿ ಪುತ್ರ. ಚಪ್ಪಲಿ ಹೊಲೆಯುವ ವೃತ್ತಿಯಿಂದ ಜೀವನ ಸಾಗಿಸುವ ತಂಗ ರವರ ಪುತ್ರ ರಾಹುಲ್ 6 ನೇ ತರಗತಿ ವಿಧ್ಯಾರ್ಥಿ. ಲಾಕ್ ಡೌನ್ ಸಂಧರ್ಭದಲ್ಲಿ ತಂದೆಯ ವೃತ್ತಿಗೆ ನೆರವಾಗುತ್ತ ಪಾದರಕ್ಷೆಗಳನ್ನ ಹೊಲೆಯುತ್ತಿದ್ದ ರಾಹುಲ್ ವಿಡಿಯೋ ನ ವ್ಯಕ್ತಿಯೊಬ್ರು ಟ್ವಿಟರ್ ನಲ್ಲಿ ಹಾಕಿದ್ದಾರೆ. ಇದನ್ನ ಗಮನಿಸಿದ ಶಾಸಕ ರಾಮದಾಸ್ ಇಡೀ ಕುಟುಂಬವನ್ನ ತಮ್ಮ ಕಚೇರಿಗೆ ಆಹ್ವಾನಿಸಿದ್ದಾರೆ. ರಾಹುಲ್ ನಲ್ಲಿರುವ ಓದಿನ ಆಸಕ್ತಿಯನ್ನ ಗುರುತಿಸಿದ ರಾಮದಾಸ್ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನ ಹೊತ್ತಿದ್ದಾರೆ.
ಶಾಸಕ ರಾಮದಾಸ್ ನೆರವಿಗೆ ಸಂತಸ ವ್ಯಕ್ತಪಡಿಸಿದ ಇಡೀ ಕುಟುಂಬ ಗದ್ಗಧಿತವಾಗಿದೆ. ತೀರಾ ಬಡ ಕುಟುಂಬಕ್ಕೆ ಪಡಿತರ ವ್ಯವಸ್ಥೆಯನ್ನ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ವಿದ್ಯುತ್ ಸಂಪರ್ಕವೂ ಇಲ್ಲದಂತಹ ಮನೆಯಲ್ಲಿ ವಾಸವಿರುವ ಕುಟುಂಬದ ನೆರವಿಗೆ ರಾಮದಾಸ್ ಬಂದಿರುವುದು ಶ್ಲಾಘನೀಯ. ಇಂಜಿನಿಯರ್ ಆಗುವ ಕನಸನ್ನ ಹೊತ್ತಿರುವ ರಾಹುಲ್ ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ.
ಪ್ರಪಂಚದಲ್ಲೇ ಅತಿ ಶ್ರೇಷ್ಠ ದಾನ ವಿದ್ಯಾದಾನ ಅಂತಾರೆ. ಇಂತಹ ದಾನಕ್ಕೆ ಮುಂದಾದ ಶಾಸಕ ರಾಮದಾಸ್ ಕಾರ್ಯ ವಿಶೇಷ ಎನಿಸಿದೆ. ರಾಮದಾಸ್ ರವರಿಂದ ಇಂತಹ ಮತ್ತಷ್ಟು ಕಾರ್ಯಗಳು ನೆರವೇರಲೆಂದು ಪವರ್ ಟಿವಿ ಆಶಿಸುತ್ತದೆ.