Saturday, May 28, 2022
Powertv Logo
Homeರಾಜ್ಯಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಮಂಗಳೂರು: ಕೊರೋನಾ ಹಾವಳಿ ಬೆನ್ನಲ್ಲೇ ರಾಜ್ಯಕ್ಕೆ ಒಂದಾದ ಬಳಿಕ ಒಂದರಂತೆ  ಅಪಾಯಗಳು ಎದುರಾಗುತ್ತಲೇ ಇದೆ. ಈಗಾಗಲೇ  ಕೊರೋನಾದಿಂದ ನಲುಗಿ ಹೋಗಿರುವ ಕರ್ನಾಟಕಕ್ಕೆ ಇದೀಗ ಚಂಡಮಾರುತದ ಭಯ ಕಾಡುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಚಂಡಮಾರುತ ಉಂಟಾಗುವ ಸಾಧ್ಯತೆಯಿದ್ದು, ಕರಾವಳಿ ಭಾಗದಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಇಂದು ಸುಮಾರು 115 ಮಿ.ಮೀ ನಿಂದ 204 ಮಿ.ಮೀ ನಷ್ಟು ಮಳೆಯಾಗುವ ಸಾದ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟನ್ನು ಘೋಷಣೆ ಮಾಡಲಾಗಿದೆ. ಇನ್ನು ಮೀನುಗಾರಿಕೆಗೂ ನಿಷೇಧವನ್ನು ಹೇರಲಾಗಿದೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments