ಬೆಂಗಳೂರು: ಕಳೆದ ಎರಡು ದಿನದಿಂದ ಸುರಿದಿದ್ದ ಬಾರಿ ಮಳೆಗೆ ಸಿಲಿಕಾನ್ ಸಿಟಿ ಜನರು ತತ್ತರಿಸಿ ಹೋಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಸತತ ಮೂರು ದಿನಗಳಿಂದ ಬಿಟ್ಟು ಬಿಡದೆ ಮಳೆರಾಯ ಕಾಡುತ್ತಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಬಿಟ್ಟು ಬಿಡದೆ ಮತ್ತೆ ವರುಣ ಕಾಡುತ್ತಿದ್ದಾನೆ. ಯಶವಂತಪುರ ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ವಿಧಾನ ಸೌಧ, ಶಾಂತಿನಗರ, ಹೆಬ್ಬಾಳ, ಯಲಹಂಕ ಆರ್. ಟಿ ನಗರ ಸೇರಿದಂತೆ ಹಲವು ಕಡೆ ವರುಣನ ಆರ್ಭಟ ಜೋರಾಗಿದೆ.