Home P.Special ಬಲಭಾಗದಲ್ಲಿ ಹೃದಯ : ಈ ವ್ಯಕ್ತಿಯ ದೇಹದಲ್ಲಿ ಎಲ್ಲಾ ಉಲ್ಟಾ-ಪಲ್ಟಾ..!

ಬಲಭಾಗದಲ್ಲಿ ಹೃದಯ : ಈ ವ್ಯಕ್ತಿಯ ದೇಹದಲ್ಲಿ ಎಲ್ಲಾ ಉಲ್ಟಾ-ಪಲ್ಟಾ..!

ಲಖನೌ : ಹೃದಯ ಯಾವ ಭಾಗದಲ್ಲಿರುತ್ತೆ..? ಅರೆ, ಏನ್ರಿ.. ರೀ ಇದೊಂದು ಕ್ವಷನ್ನಾ? ಆಟ ಆಡೋ ಮಕ್ಕಳನ್ನು ಕೇಳಿದ್ರೂ ಹೇಳ್ತಾರೆ, ಎಡಭಾಗದಲ್ಲಿ ಅಂತ. ನೀವೇನು ವಿಶೇಷವಾಗಿ ಕೇಳ್ತಿದ್ದೀರಾ ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ? ಆದರೆ ಇದೊಂದು ಸೋಜಿಗದ ಸ್ಟೋರಿ..ವ್ಯಕ್ತಿಯೊಬ್ಬರಿಗೆ ಎಡಭಾಗದ ಬದಲು ಬಲ ಭಾಗದಲ್ಲಿ ಹೃದಯವಿದೆ..! 
ಅಚ್ಚರಿ ಆದ್ರೂ ಇದು ಸತ್ಯ.. ಸತ್ಯ .. ಸತ್ಯ..! ಉತ್ತರ ಪ್ರದೇಶದ ಖುಷಿನಗರದ ಜಮಾಲುದ್ದೀನ್ ಅನ್ನೋ ವ್ಯಕ್ತಿ ಬಲಭಾಗದಲ್ಲಿ ಹೃದಯ ಹೊಂದಿರುವವರು..! ಜಮಾಲುದ್ದೀನ್ ಅವರಿಗೂ ಮೊನ್ನೆ ಮೊನ್ನೆ ತನಕ ಈ ವಿಷಯ ಗೊತ್ತಿರ್ಲಿಲ್ಲ…!

ಇತ್ತೀಚೆಗೆ ಸಿಕ್ಕಾಪಟ್ಟೆ ಹೊಟ್ಟೆ ನೋವು ಅಂತ ಅವರು ಗೋರಖ್​ಪುರ ಆಸ್ಪತ್ರೆಗೆ ಹೋಗಿದ್ರು. ಡಾಕ್ಟರ್ ಸ್ಕ್ಯಾನಿಂಗ್ ಮಾಡ್ದಾಗ ಈ ಅಚ್ಚರಿ ಸಂಗತಿ ಬಯಲಾಗಿದೆ.
ಜಮಾಲುದ್ದೀನ್ ದೇಹದಲ್ಲಿ ಅಂಗಾಗಳು ಇರಬೇಕಾದ ಜಾಗದಲ್ಲಿ ಇಲ್ಲ..! ಹೃದಯ ಮಾತ್ರವಲ್ಲ ಎಲ್ಲಾ ಒಳ ಅಂಗಾಗಳು ಕೂಡ  ಉಲ್ಟಾಪಲ್ಟಾ..ಅಂದರೆ ಕನ್ನಡಿಯಲ್ಲಿ ನೋಡಿದಾಗ ಕಾಣುವಂತೆ ‘ರಿವರ್ಸ್​’ ಆಗಿವೆ. ಇದನ್ನು ಸೈಟಸ್​ ಇನ್​ ವರ್ಸಸ್​ ಅಂತ ಕರೀತಾರೆ. ಇದು ಬಹಳ ಅಪರೂಪದಲ್ಲಿ ಅಪರೂಪದ ಪ್ರಕರಣ. ವಿಶ್ವದ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಈ ರೀತಿ ರಚನೆ ಆಗಿರುತ್ತಂತೆ. ಇದರಿಂದ ವ್ಯಕ್ತಿಗೆ ಯಾವ್ದೇ ರೀತಿಯ ತೊಂದರೆ ಆಗಲ್ಲ. ಜೀವಕ್ಕೂ ಅಪಾಯವಿಲ್ಲ ಅಂತ ಡಾಕ್ಟರ್​ ಅಭಯ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments