ನವದೆಹಲಿ : ಕೊರೋನಾ ಸೋಂಕು ಹರಡುವಿಕೆ ತಡೆಗೆ ಮಾಸ್ಕ್ ಧರಿಸುವಂತೆ ಸರ್ಕಾರವೇ ಸಾರ್ವಜನಿಕರಿಗೆ ಹೇಳಿದೆ. ಅಂತೆಯೇ ನಾನಾ ರೀತಿಯ ಮಾಸ್ಕ್ಗಳು ಬಳಕೆ ಆಗುತ್ತಿವೆ. ಅವುಗಳಲ್ಲಿ N-95ಮಾಸ್ಕ್ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಇದೀಗ ಕೇಂದ್ರ ಸರ್ಕಾರ ರಂಧ್ರಗಳಿರೋ N-95 ಮಾಸ್ಕ್ಗಳು ಕೊರೋನಾ ಸೋಂಕು ಹರಡುವಿಕೆ ತಡೆಯಲ್ಲ ಅಂತ ಎಚ್ಚರಿಕೆಯನ್ನು ನೀಡಿದೆ.
ರಂಧ್ರಗಳಿರೋ N-95 ಮಾಸ್ಕ್ ಧರಿಸೋದ್ರಿಂದ ಕೊರೋನಾ ಸೋಂಕು ದೇಹದೊಳಗೆ ಸೇರೋದನ್ನು, ಸೋಂಕಿತ ವ್ಯಕ್ತಿಯ ದೇಹದಿಂದ ಹೊರಗೆ ಬರೋದನ್ನು ತಪ್ಪಿಸಲಾಗಲ್ಲ ಅಂತ ಕೇಂದ್ರ ಎಚ್ಚರಿಸಿದ್ದು, N-95 ಮಾಸ್ಕ್ ಸರಿಯಾದ ಬಳಕೆಗೆ ಮಾರ್ಗಸೂಚಿ ಅಗತ್ಯವಿದೆ ಅಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ರಾಜೀವ್ ಗರ್ಗ್ ಈ ಬಗ್ಗೆ ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.