Homeರಾಜ್ಯ‘ಅವನೇ ಶ್ರೀಮನ್ನಾರಾಯಣನಿಗೆ ಒಲಿದ ರಾಷ್ಟ್ರ ಪ್ರಶಸ್ತಿ’

‘ಅವನೇ ಶ್ರೀಮನ್ನಾರಾಯಣನಿಗೆ ಒಲಿದ ರಾಷ್ಟ್ರ ಪ್ರಶಸ್ತಿ’

ಬೆಂಗಳೂರು: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಹಾಗೂ ತುಳು ಭಾಷೆಯ ಪಿಂಗಾರಾ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಬ್ಲಾಕ್‌ಬಸ್ಟರ್ ಚಿತ್ರಗಳ ಸಾಲಿಗೆ ಸೇರಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ ಸಿಕ್ಕಿದೆ. ಈ ಚಿತ್ರಕ್ಕೆ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದರು. ಕನ್ನಡದ ‘ಅಕ್ಷಿ’ ಚಿತ್ರ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ ಹಿಂದಿಯ ಛಿಚೋರೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿವೆ.

‘ಭೋಸ್ಲೆ’ ಚಿತ್ರದಲ್ಲಿನ ನಟನೆಗಾಗಿ ಬಾಲಿವುಡ್ ನಟ ಮನೋಜ್ ಬಾಜ್‌ಪೇಯಿ ಹಾಗೂ ‘ಅಸುರನ್’ ಚಿತ್ರದಲ್ಲಿನ ನಟನೆಗಾಗಿ ತಮಿಳು ನಟ ಧನುಷ್ ಜಂಟಿಯಾಗಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರದಲ್ಲಿನ ನಟನೆಗಾಗಿ ನಟಿ ಕಂಗನಾ ರನೌತ್ ಅತ್ಯುತ್ತಮ ನಟಿ ಪ್ರಶಸ್ತಿಗಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments