Tuesday, September 27, 2022
Powertv Logo
Homeರಾಜ್ಯಸಿಎಂ ಮನೆ ಎದುರು ದೇವೇಗೌಡರ ಧರಣಿ...! ಮಾಜಿ ಪ್ರಧಾನಿಗಳ ಈ ನಿರ್ಧಾರಕ್ಕೆ ಕಾರಣ ಏನು ಗೊತ್ತಾ

ಸಿಎಂ ಮನೆ ಎದುರು ದೇವೇಗೌಡರ ಧರಣಿ…! ಮಾಜಿ ಪ್ರಧಾನಿಗಳ ಈ ನಿರ್ಧಾರಕ್ಕೆ ಕಾರಣ ಏನು ಗೊತ್ತಾ

ಮಂಡ್ಯ : ಜಿಲ್ಲೆಯ ಕೆ ಆರ್.ಪೇಟೆಯಲ್ಲಿ ವೈಷಮ್ಯದ ರಾಜಕಾರಣ ನಡೆಯುತ್ತಿದೆ. ನನ್ನ ಸುದೀರ್ಘ 60 ವರ್ಷಗಳ ರಾಜಕಾರಣದಲ್ಲಿ ಎಂದು ಕಂಡಿಲ್ಲದ ಕೆಟ್ಟ ವಾತಾವರಣ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ನನ್ನ ಪಕ್ಷದ ಒಬ್ಬ ಕಾರ್ಯಕರ್ತರಾದ ಹೆಚ್.ಟಿ.ಮಂಜು ಎಂಬುವರ ಮೇಲೆ ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಇಲ್ಲಿನ ಸಚಿವರು.
ಹೆಚ್.ಟಿ.ಮಂಜು ಅವರ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ಸರ್ಕಾರ, ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದುಕೊಂಡಿದ್ದರೂ ಸಸ್ಯಹಾರದ ಸ್ಥಳೀಯ ರಾಜಕಾರಣದಿಂದ ಇವರಿಗೆ ವ್ಯವಹಾರ ಮಾಡಲು ಬಿಡುತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಸಚಿವರಿಗೆ ಪ್ರತ್ಯೇಕವಾದ ಪತ್ರವನ್ನ ಸಹ ಬರೆದಿದ್ದೀನಿ. ಕಾನೂನು ಬದ್ಧವಾಗಿ ಹೆಚ್.ಟಿ.ಮಂಜು ಅವರಿಗೆ ವ್ಯವಹಾರ ನಡೆಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಸರ್ಕಾರ ಇದರ ಬಗ್ಗೆ ಪಾರದರ್ಶಕತೆ ತೋರಿಸದೆ ಹೋದರೆ ಇದೇ ತಿಂಗಳ 29ನೇ ತಾರೀಖು ಮುಖ್ಯಮಂತ್ರಿಗಳ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಕೂರುತ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆಯೂ ಪ್ರತಿಭಟಿಸಿದ್ದ ಹೆಚ್ಡಿಡಿ:

ಜೆಡಿಎಸ್ ಜಿಪಂ ಸದಸ್ಯ ಹೆಚ್.ಟಿ.ಮಂಜು ವಿರುದ್ಧದ ರಾಜಕೀಯ ವೈಷಮ್ಯದ ವಿರುದ್ಧ ದೇವೇಗೌಡರ ಹೋರಾಟ ಇದೇ ಮೊದಲೇನಲ್ಲ.
ಈ ಹಿಂದೆಯೂ ದೇವೇಗೌಡರು ಸ್ವತಃ ಹೆಚ್.ಟಿ.ಮಂಜು ನಡೆಸುತ್ತಿರುವ ಕ್ರಷರ್ ಪ್ರದೇಶದಲ್ಲೇ ಪ್ರತಿಭಟನಾ ಸಭೆ ನಡೆಸಿ, ಸರ್ಕಾರ ಮತ್ತು ಸಚಿವರಿಗೆ ಎಚ್ಚರಿಕೆ ನೀಡಿದ್ದರು.
ಇದೀಗ ಮತ್ತೊಮ್ಮೆ ಸ್ವತಃ ದೇವೇಗೌಡರೇ ಸಿಎಂ ಮನೆ ಎದುರು ಧರಣಿಗೆ ನಿರ್ಧರಿಸಿದ್ದು, ಸರ್ಕಾರ ಮತ್ತು ಸಿಎಂ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಕಾದು ನೋಡಬೇಕಿದೆ.
….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

LEAVE A REPLY

Please enter your comment!
Please enter your name here

- Advertisment -

Most Popular

Recent Comments