ಹಾವೇರಿಯಲ್ಲಿ ತಯಾರಾದ ವಿಶ್ವಕಪ್​..!

0
327
ಹಾವೇರಿ : ಇಡೀ ಕ್ರಿಕೆಟ್ ಜಗತ್ತೇ ಎದುರು ನೋಡ್ತಾ ಇರೋ ಕ್ಷಣ ಹತ್ತಿರವಾಗ್ತಾ ಇದೆ..! ವಿಶ್ವಕಪ್​ ವೇಳಾಪಟ್ಟಿ ಅನೌನ್ಸ್​ ಆದಲ್ಲಿಂದ ಭಾರತ ಮಾತ್ರವಲ್ಲದೆ ವಿಶ್ವದ ಕ್ರಿಕೆಟ್ ಪ್ರಿಯರು ಕಾಯ್ತಾ ಇದ್ದ ದಿನವಿದು.
ಹೌದು, ಎಮರೇಟ್ಸ್ ಓಲ್ಡ್ ಟ್ರಾಫರ್ಡ್​ ಸ್ಟೇಡಿಯಂನಲ್ಲಿಂದು ಭಾರತ ಮತ್ತು ಪಾಕಿಸ್ತಾನ್ ನಡುವಿನ ಮ್ಯಾಚ್ ಇದೆ. ವಿಶ್ವವೇ ಈ ಮ್ಯಾಚ್​ಗಾಗಿ ಕಾಯುತ್ತಿದೆ. ಬದ್ಧವೈರಿಗಳ ನಡುವಿನ ಕಾಳಗಕ್ಕೆ ವರುಣದೇವ ಅನುವು ಮಾಡಿಕೊಟ್ಟರೆ ಜಿದ್ದಾಜಿದ್ದಿನ ಹೋರಾಟವಂತೂ ಪಕ್ಕಾ..! 
ಇನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಪ್ರಬಲ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿದ್ದು, ಪಾಕ್​ ಅನ್ನು ಕೂಡ ಸುಲಭವಾಗಿ ಬಗ್ಗು ಬಡಿಯಲಿದೆ ಅನ್ನೋ ವಿಶ್ವಾಸ ಭಾರತೀಯ ಅಭಿಮಾನಿಗಳದ್ದು. 
ಪಾಕ್​ ಅನ್ನು ಸೋಲಿಸಲು ರೆಡಿಯಾಗಿರುವ ಕೊಹ್ಲಿ ಬಳಗಕ್ಕೆ ದೇಶದ ಜನ ಶುಭಹಾರೈಸುತ್ತಿದ್ದಾರೆ. ಅನೇಕರು ವಿನೂತನ ರೀತಿಯಲ್ಲಿ ಶುಭಕೋರುತ್ತಿದ್ದಾರೆ. ಅಂತೆಯೇ ಹಾವೇರಿಯ ಅಭಿಮಾನಿಯೊಬ್ಬರು ಬಹಳ ವಿಶೇಷವಾಗಿ ವಿಶ್ ಮಾಡಿದ್ದಾರೆ. 
ಹಾವೇರಿಯ ಯಾಲಕ್ಕಿ ಓಣಿಯಲ್ಲಿರುವ ವೈಭವ ಜ್ಯೂಯಲರಿ ವರ್ಕ್ಸ್​​ನ ಗಣೇಶ್​ ವಿ ರಾಯ್ಕರ್​​ ಅವರು 0.500 ಮಿಲಿಗ್ರಾಂ ಬೆಳ್ಳಿಯಲ್ಲಿ 2.2 ಸೆಂಟಿಮೀಟರ್ ನ ವಿಶ್ವಕಪ್ ಅನ್ನು ರಚಿಸಿದ್ದಾರೆ.  ಹೀಗೆ ವಿಶೇಷ ರೀತಿಯಲ್ಲಿ ಟೀಮ್ ಇಂಡಿಯಾಕ್ಕೆ ಶುಭ ಹಾರೈಸಿದ್ದಾರೆ. 
ಗಣೇಶ್ ಅವರು ತಯಾರಿಸಿರುವ ವಿಶ್ವಕಪ್​ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಗಣೇಶ್ ಅವರು ಈ ಹಿಂದೆ ಸಿರಿಧಾನ್ಯ ಚಿತ್ರಕಲೆ ರಚಿಸಿ ದಾಖಲೆ ನಿರ್ಮಿಸಿದ್ದರು. 
ಬಂಗಾರದ ವಿಶ್ವಕಪ್ ತಯಾರಿಸ್ತಾರಂತೆ..! : ಗಣೇಶ್ ಅವರು ಭಾರತ ವಿಶ್ವಕಪ್ ಗೆದ್ದು ಬರಬೇಕು ಅಂತ ಎಲ್ಲರಂತೆ ಆಸೆ ಪಟ್ಟಿದ್ದಾರೆ. “ನನ್ನ ನೆಚ್ಚಿನ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ಸಿಕ್ಸ್ ಬಾರಿಸುವ ಮೂಲಕ ಪಂದ್ಯವನ್ನಗೆಲ್ಲಿಸ ಬೇಕು,” ಈ ಬಾರಿ ಭಾರತ ವಿಶ್ವಕಪ್ ಗೆದ್ದರೆ ನಾನು ಇದೇ ತರಹದ ವಿಶ್ವಕಪ್​ ಅನ್ನು ಬಂಗಾರದಲ್ಲಿ ತಯಾರು ಮಾಡ್ತೀನಿ” ಎಂದಿದ್ದಾರೆ. 

LEAVE A REPLY

Please enter your comment!
Please enter your name here