Sunday, May 29, 2022
Powertv Logo
Homeರಾಜ್ಯಎತ್ತುಗಳ ಚಿರತೆ ಓಟಕ್ಕೆ ಜನ ಫುಲ್​​ ಫಿದಾ

ಎತ್ತುಗಳ ಚಿರತೆ ಓಟಕ್ಕೆ ಜನ ಫುಲ್​​ ಫಿದಾ

ಹಾವೇರಿ :ರಣ ಬಿಸಿಲಿನ ನಡುವೆಯೂ ಜಬರ್ದಸ್ತ್ ಜವಾರಿ ಹೋರಿಗಳ ಕೋಲ್ಮಿಂಚನ ಓಟ ನೋಡಲು ಸಾವಿರಾರು ಜನ ಕಿಕ್ಕಿರಿದು ಸೇರಿದ್ರು. ಅಖಾಡದಲ್ಲಿ ನಾ ಮುಂದು ತಾ ಮುಂದು ಅಂತ ಚಿರತೆ ವೇಗದ ಜೋಡೆತ್ತುಗಳ ಓಟಕ್ಕೆ ಸಿಳ್ಳೆ, ಕೇಕೆಗಳು ಮುಗಿಲು ಮುಟ್ಟಿದ್ದವು.

ರಣರಂಗದಲ್ಲಿ ಖಾಲಿ ಗಾಡಿಗಳನ್ನ ಎಳೆಯುತ್ತಾ ಶರವೇಗದಲ್ಲಿ ಓಡುತ್ತಿರುವ ಕೊಬ್ಬಿದ ಜೋಡೆತ್ತುಗಳು.. ನಮ್ಮದೇ ಜೋಡಿ ಫಸ್ಟ್ ಅಂತಾ ಸಿಳ್ಳೆ, ಕೇಕೆ‌ ಹಾಕುತ್ತಿರುವ ಅಭಿಮಾನಿಗಳು.. ಹೌದು, ಜೋಡೆತ್ತುಗಳ ಚಿರತೆ ಓಟದ ಈ ಕ್ರೀಡೆ ಕಂಡುಬಂದಿದ್ದು, ಸಿಎಂ ಬೊಮ್ಮಾಯಿ ತವರು ಶಿಗ್ಗಾಂವಿ ತಾಲೂಕಿನ ಅತ್ತಿಗೇರಿಯಲ್ಲಿ.

ಅತ್ತಿಗೇರಿ ಗ್ರಾಮದ ಹನುಮ ಜಯಂತಿ ಮತ್ತು ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ ಮತ್ತು ಕಬಡ್ಡಿ ಆಯೋಜಿಸಲಾಗಿತ್ತು. ಸ್ಪರ್ಧೆ ವೀಕ್ಷಣೆಗೆ ಭಾರೀ ಜನಸ್ತೋಮ ನೆರೆದಿದ್ದು.ಬಲಿಷ್ಠ ಜೋಡೆತ್ತುಗಳು ನಾ ಮುಂದು ತಾ ಮುಂದು ಎಂದು ಚಿರತೆ ವೇಗದಲ್ಲಿ ಓಡುತ್ತಿದ್ದರೆ ಪ್ರೇಕ್ಷಕರು ಸಿಳ್ಳೆ, ಕೇಕೆ ಹಾಕಿ ಹುರಿದುಂಬಿಸಿದರು.

ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಜೋಡೆತ್ತಿಗೆ ಮೊದಲ ಬಹುಮಾನ 50 ಸಾವಿರ, ಎರಡನೇ ಬಹುಮಾನ 35 ಸಾವಿರ ಹಾಗೂ ಮೂರನೇ ಬಹುಮಾನ 25 ಸಾವಿರ ನೀಡಲಾಯ್ತು. ಜೊತೆಗೆ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಕೂಡ ಆಯೋಜಿಸಲಾಗಿತ್ತು.ಅತ್ತಿಗೇರಿ ಗ್ರಾಮದ ಯುವ ಕಬಡ್ಡಿ ಪಟುಗಳು ಪ್ರಶಸ್ತಿ ಮುಡಿಗೇರಿಸಿಕೊಂಡ್ರು.

ಒಟ್ಟಿನಲ್ಲಿ ‌ಕಣ್ಮನ ಸೆಳೆದ ಜವಾರಿ ಹೋರಿಗಳ ಪೈಪೋಟಿ, ನೋಡುಗರ‌ನ್ನು ರೋಮಾಂಚನಗೊಳಿಸಿತು. ವರ್ಷ ಪೂರ್ತಿ ರೈತನಿಗಾಗಿ ದುಡಿದ ಎತ್ತುಗಳು ಇಂತಹ ಗ್ರಾಮೀಣ ಕ್ರೀಡೆಗಳಿಂದ ರಿಲ್ಯಾಕ್ಸ್ ಆಗಿವೆ.

- Advertisment -

Most Popular

Recent Comments