Home uncategorized ತಲೆ ಒಡೆದು ಮಹಿಳೆ ಸರ ಕಿತ್ತು ಸಿಕ್ಕಿಬಿದ್ದ ಪಿಯು ವಿದ್ಯಾರ್ಥಿ..!

ತಲೆ ಒಡೆದು ಮಹಿಳೆ ಸರ ಕಿತ್ತು ಸಿಕ್ಕಿಬಿದ್ದ ಪಿಯು ವಿದ್ಯಾರ್ಥಿ..!

ಹಾಸನ: ತಾಲೂಕಿನ ಶಂಕದ ಕೊಪ್ಪಲು ಗ್ರಾಮದ ಬಳಿ ದನ ಮೇಯಿಸುತ್ತಿದ್ದ ಮಹಿಳೆ ತಲೆ ಒಡೆದು ರೈತ ಮಹಿಳೆ ಕೊರಳಲ್ಲಿದ್ದ ಚಿನ್ನದ ಸರ ಕಸಿದಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ೨ನೇ ಪಿಯುಸಿ ಓದುತ್ತಿದ್ದ ಚಿಕ್ಕಕೊಂಡಗೊಳ
ಗ್ರಾಮದ ಚಂದನ್ ಎಂಬಾತ ಬೈಕ್ ನಲ್ಲಿ ತೆರಳಿ ಈ ಕೃತ್ಯ ಎಸಗಿದ್ದ. ಶಂಕದ ಕೊಪ್ಪಲು ನಿವಾಸಿ ಶಾರದಮ್ಮ ಎಂಬ ಮಹಿಳೆ ಜಮೀನು ಬಳಿ ದನ ಮೇಯಿಸುತ್ತಿದ್ದಾಗ ಅಲ್ಲಿಗೆ ತೆರಳಿದ್ದ ಕಳ್ಳ ವಿದ್ಯಾರ್ಥಿ, ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ತೀವ್ರ ವಿರೋಧ ವ್ಯಕ್ತ ಪಡಿಸಿದಾಗ ಮರದ ತುಂಡಿನಿಂದ ಮಹಿಳೆ ತಲೆಗೆ ಹೊಡೆದು ಚಿನ್ನದ ಸರ ಕಿತ್ತಿದ್ದಾನೆ. ಮಹಿಳೆ ಕೂಗಾಟ ತಿಳಿದ ಸ್ಥಳೀಯರು ಓಡಿ ಬಂದಾಗ ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಆರೋಕಿಯಪ್ಪ ಮತ್ತವರ ತಂಡ, ಗಂಭೀರ ಪೆಟ್ಟು ತಿಂದಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಬಿಟ್ಟು ಹೋಗಿದ್ದ ಆರೋಪಿ, ಅಲ್ಲೇ ಹೊಂಚು ಹಾಕುತ್ತಿರುವುದನ್ನು ತಿಳಿದ ಪೊಲೀಸರು ಕೆಲವೇ ಹೊತ್ತಿನಲ್ಲಿ ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರದಮ್ಮ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...