Home P.Special 3 ವರ್ಷದ ಹಿಂದೆ ಮೃತಪಟ್ಟ ಪತ್ನಿಯನ್ನು ಗೃಹಪ್ರವೇಶಕ್ಕೆ ಕರೆತಂದ ಪತಿ..!

3 ವರ್ಷದ ಹಿಂದೆ ಮೃತಪಟ್ಟ ಪತ್ನಿಯನ್ನು ಗೃಹಪ್ರವೇಶಕ್ಕೆ ಕರೆತಂದ ಪತಿ..!

ಕೊಪ್ಪಳ : ಅದು ಗೃಹಪ್ರವೇಶದ ಶುಭ ಸಂದರ್ಭ ಪತ್ನಿಯ ಬಯಕೆಯಂತೆ ಕನಸಿನ ಮನೆ ನಿರ್ಮಿಸಿದ ಪತಿರಾಯ ಬೃಹತ್ ಗೃಹ ಪ್ರವೇಶ ಕಾರ್ಯಕ್ರಮ ಇಟ್ಕೊಂಡಿದ್ರು. ಇನ್ನೂ ಗೃಹ ಪ್ರವೇಶಕ್ಕೆ ಮನೆಗೆ ಬಂದ ಅತಿಥಿಗಳಿಗೆಲ್ಲಾ ಅಚ್ಚರಿಯೊಂದು ಕಾದಿತ್ತು. ಮೂರು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದ ಆ ತಾಯಿಯೇ ಎಲ್ಲರನ್ನೂ ಸ್ವಾಗತಿಸಿದ ದೃಶ್ಯ ಕಂಡು ನಿಬ್ಬೆರಗಾಗಿದ್ದರು! 

ಪ್ರೀತಿಸಿದ ಪ್ರೇಯಸಿ ಮರಣದ ನಂತರ ಆಕೆಯ ನೆನಪಿಗಾಗಿ ಶಹಜಾನ್ ತಾಜಮಹಲ್ ಕಟ್ಟಿ ಯುವ ಪ್ರೇಮಿಗಳ ಎದೆಯಲ್ಲಿ ಇಂದಿಗೂ ಅಚ್ಚಳಿಯದೇ ಉಳಿದ್ದಿದ್ದಾರೆ. ಆದ್ರೆ ಕೊಪ್ಪಳದ ಖ್ಯಾತ ವಾಣಿಜ್ಯೋದ್ಯಮಿ ಒಬ್ಬರು ಅಗಲಿದ ಪ್ರೀತಿಯ ಪತ್ನಿಯ ಸವಿನೆನಪಿಗಾಗಿ ಪತ್ನಿಯ ತದ್ರೂಪಿ ಪ್ರತಿಮೆಯನ್ನು ನಿರ್ಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಕೊಪ್ಪಳ ಭಾಗ್ಯನಗರದ ನಿವಾಸಿಯಾಗಿರುವ ಉಧ್ಯಮಿ ಶ್ರೀನಿವಾಸ ಗುಪ್ತಾ ಕಳೆದರಡು ದಿನದ ಹಿಂದೆ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇಟ್ಕೊಂಡಿದ್ದರು. ಗೃಹ ಪ್ರವೇಶಕ್ಕೆ ಬರುವ ಅತಿಥಿಗಳಿಗೆ ಅಚ್ಚರಿಯೊಂದು ಕಾದಿತ್ತು.  ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಶ್ರೀನಿವಾಸ ಗುಪ್ತಾ ಅವರ ಪತ್ನಿ ಮಾಧವಿ ಎಲ್ಲರನ್ನೂ ಬರಮಾಡಿಕೊಳ್ಳುತ್ತಿದ್ದರು!

ಪತ್ನಿ ಇಲ್ಲ ಅನ್ನುವ  ಕೊರಗು ಬರಬಾರದು ಎಂದು ಯೋಚಿಸಿದ ಗುಪ್ತಾ, ಗೃಹಪ್ರವೇಶಕ್ಕೆ ನನ್ನ ಪತ್ನಿಯೂ ಪಾಲ್ಗೊಳ್ಳುವಂತಾಗಬೇಕು. ಅವಳ ನೆನಪಿಗಾಗಿ ಎನಾದರೂ ಮಾಡಲೇ ಬೇಕು ಎಂದು ದೊಡ್ಡ ದೊಡ್ಡ ಇಂಜಿನಿಯರ್ಸಗಳಿಂದ ಐಡಿಯಾ ಪಡೆದುಕೊಂಡರು. ವಕೊನೆಗೆ ಗೂಗಲ್ ಸರ್ಚ್ ಮಾಡಿ, ಊರು-ಕೇರಿ ಅಲೆದು, ಒಂದು ಸೂಪರ್ ಐಡಿಯಾ ಮಾಡಿಯೇ ಬಿಟ್ರು. ಕೊನೆತನಕ ನಮ್ಮ ಜೊತೆ ಉಸಿರಾಗಿರುವುಂತೆ ಅದ್ಭುತ ಪ್ರತಿಮೆಯನ್ನು ನಿರ್ಮಿಸಿದ್ರು. 

 ಬೆಂಗಳೂರಿನ ಬೊಂಬೆ ಮನೆ ಕಲಾವಿದರನ್ನು ಸಂಪರ್ಕಿಸಿ ಮನದಿಂಗಿತವನ್ನು ಹೇಳಿಕೊಂಡಾಗ ರಬ್ಬರ್ ಮತ್ತು ಸಿಲಿಕಾನ್ ಮಟಿರಿಯಲ್ ಮೂಲಕ ಹೆಂಡತಿಯ ನೈಜರೂಪದ ಪ್ರತಿಮೆಯನ್ನು ಮಾಡಬಹುದಾಗಿ ತಿಳಿದು ಅದನ್ನು ಮಾಡಿಕೊಡಲು ಹೇಳಿದ್ದಾರೆ.  ಅದು ಯಾವುದೇ ಕೋನದಲ್ಲೂ ಬೊಂಬೆ ಅನಿಸಲ್ಲ. ಅವರೊಬ್ಬ ವ್ಯಕ್ತಿ ಎನ್ನುವಷ್ಟರಮಟ್ಟಿಗಿದೆ.

ಪ್ರತಿ ದಿನ ಪತ್ನಿಯಂತಿರುವ ಬೊಂಬೆಗೆ ಸೀರೆ ಬದಲಾವಣೆ ಮಾಡಬಹುದು,ಅಷ್ಟೇ ಯಾಕೆ ಮೆಕಪ್ ಸಹ ಮಾಡಬಹದು. ಇನ್ನೂ ಬೆರಳಿಗೆ ಉಂಗರ ಕೊರಳಿಗೆ ಆಭರಣ ಎಲ್ಲವನ್ನು ಹಾಕಬಹುದು. ಜೀವ ಇಲ್ಲದ ಬೊಂಬೆಗೆ ಪ್ರೀತಿ ಎಂಬ ಜೀವ ತುಂಬಿದ್ದಾರೆ ಗುಪ್ತಾ. ಇನ್ನೂ ಅವರ ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲ. ಅಮ್ಮ ಜೊತೆಯಲ್ಲೇ ಇದ್ದಾಳೆ ಎನ್ನುವ ಭಾವದಲ್ಲಿ ಗೃಹಪ್ರವೇಶ ಕಾರ್ಯ ಮುಗಿಸಿದ್ದಾರೆ.

ಇನ್ನೂ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಮೊದಲು ದಿಗ್ಭ್ರಮೆಗೊಂಡು ಆನಂತರ ಸಿಲಿಕಾನ್ ಬೊಂಬೆಯ ಪ್ರತಿರೂಪದ ಜೊತೆ ಫೋಟೊ ತೆಗೆಸಿಕೊಂಡದ್ದೇ ದೊಡ್ಡ ಸಂಭ್ರಮವಾಗಿತ್ತು ಎನ್ನಬಹುದು.

ನಾನು ಜೀವನದಲ್ಲಿ ಹೆಚ್ಚು ಪ್ರೀತಿಸುವ ಜೀವ ಅದು. ದೇವರು ನನಗೆ ಇಷ್ಟು ಮಾತ್ರ ಶಕ್ತಿ ಕೊಟ್ಟಿದ್ದಾನೆ. ಜೀವ ತುಂಬುವ ಶಕ್ತಿ ನನಗೆ‌ ಇದ್ದಿದ್ದರೆ ತಡ ಮಾಡುತ್ತಲೇ ಇರಲಿಲ್ಲ. ಇದಕ್ಕೆ ಬೆಲೆ ಕೇಳಬೇಡಿ. ನನ್ನವಳ ನೆನಪುಗಳಿಗೆ ಬೆಲೆಯನ್ನೇ ಕಟ್ಟಲಾಗಲ್ಲ ಎಂದು ಭಾವುಕರಾಗ್ತಾರೆ ಗುಪ್ತಾ.

ಏನೇ ಹೇಳಿ ಈಗಿನ ಕಾಲದಲ್ಲೂ ಇಂತಹ ಪತಿರಾಯರೂ ಇದ್ದಾರಾ ಅನ್ನೊವರಿಗೆ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ ಗುಪ್ತಾ. ಸೋಶಿಯಲ್ ಮಿಡಿಯಾದಲ್ಲಿ ಗುಪ್ತಾ ಪತ್ನಿಯ ಪ್ರತಿಮೆಕ್ಕೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 

-ಶುಕ್ರಾಜ ಕುಮಾರ್ 

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments