Monday, January 17, 2022
Powertv Logo
HomePower Specialವರನ ವಾಟ್ಸಾಪ್ ಗೆ ಬಂದ್ವು ಆ ‘ಮೂರು ಫೋಟೋ’..ಮುಂದಾಗಿದ್ದು ಸಿನಿಮೀಯ ಮದ್ವೆ..!

ವರನ ವಾಟ್ಸಾಪ್ ಗೆ ಬಂದ್ವು ಆ ‘ಮೂರು ಫೋಟೋ’..ಮುಂದಾಗಿದ್ದು ಸಿನಿಮೀಯ ಮದ್ವೆ..!

ಏನಾದ್ರು ಫಂಕ್ಷನ್ಸ್ ಅಂದ್ರೆ ಸಾಕು, ಚೆನ್ನಾಗಿ ರೆಡಿಯಾಗ್ಬೇಕು.. ಒಂದೆರಡು ಫೋಟೋಗಳನ್ನ ತೆಗಿಸ್ಕೊಳ್ಬೇಕು ಅನ್ನೋ ಕ್ರೇಜ್ ಇರುತ್ತೆ.. ಆದ್ರೆ ಅಂತಹ ಮೂರು ಫೋಟೋಗಳಿಂದ್ಲೇ ನಿಶ್ಚಯವಾಗಿದ್ದ ಮದುವೆ ಮುರಿದು ಬಿದ್ದಿದೆ. ಆ ಮದ್ವೆ ಮುರಿದು ಬೀಳೋ ಅಂತದ್ದು ಏನಾಯ್ತು…?
ಹೌದು ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಈ ವೇಳೆಗೆ ಯೋಧ ತಾರೇಶ್ ಹಾಸನದ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಯುವತಿಯ ಕೈ ಹಿಡಿಯುತ್ತಿದ್ದ. ಎರಡೂ ಕುಟುಂಬಗಳು ಒಪ್ಪಿ ನವೆಂಬರ್ 29 ರಂದು ಮದುವೆ ನಿಶ್ಚಯಿಸಿದ್ರು. ಆದ್ರೆ ತಾಳಿ ಕಟ್ಟುವ ಮುನ್ನವೇ ಮಧುಮಗನ ವಾಟ್ಸಾಪ್ ಗೆ ಮೂರು ಫೋಟೋಗಳು ಬಂದ್ವು.. ಆ ಮೂರು ಫೋಟೋಗಳಿಂದ ಅವರಿಬ್ಬರ ಮದುವೆಯೇ ಮುರಿದುಬಿತ್ತು.. ಆ ಅಷ್ಟೂ ಫೋಟೋಗಳು ತನ್ನ ಕೈ ಹಿಡಿಯಬೇಕಾದ ಹುಡುಗಿ ಬೇರೊಬ್ಬರ ಜೊತೆ ತೆಗೆಸಿಕೊಂಡ ಫೋಟೋಗಳಾಗಿದ್ದವು..!
ಅಂದಹಾಗೆ ಯಾರೋ ಅಪರಿಚಿತನೊಬ್ಬ ಅಭಿಲಾಷ್ ಎಂಬುವವನೊಂದಿಗೆ ತೆಗೆಸಿಕೊಂಡಿದ್ದ ಪೋಟೋಗಳನ್ನ ವರನಿಗೆ ವಾಟ್ಸಾಪ್ ಮಾಡಿದ್ದ. ಅವುಗಳನ್ನು ನೋಡಿದ ತಾರೇಶ್, ಯುವತಿಗೆ ಬೇರೊಬ್ಬನೊಂದಿಗೆ ಅಫೇರ್ ಇದೆ. ಆಕೆಯ ನಡತೆ ಸರಿಯಿಲ್ಲ ಅಂತ, ಮದುವೆಯನ್ನ ರಿಜೆಕ್ಟ್ ಮಾಡ್ದ. ಜೊತೆಗೆ ಈ ಗಲಾಟೆ ಪೊಲೀಸ್ ಠಾಣಾ ಮೆಟ್ಟಿಲೂ ಏರಿತು. ದಿಢೀರ್ ಕಾರ್ಯಪ್ರವೃತ್ತರಾದ ಪೊಲೀಸ್ರು, ಅಭಿಲಾಷ್ ಬೆನ್ನತ್ತಿದ್ರು. ಅಷ್ಪೊತ್ತಿಗಾಗ್ಲೆ ಅಭಿಲಾಷ್ ಛತ್ರಕ್ಕೆ ಕಾಲಿಟ್ಟಿದ್ದ.
ನನ್ನಿಂದಾಗಿ ಒಬ್ಬ ಯುವತಿಯ ಜೀವನ ಹಾಳಾಗಬಾರದೆಂದು ಅಭಿಲಾಷ್ ಆ ಯುವತಿಯನ್ನ ತಾನೇ ವರಿಸಿದ. ಬಳಿಕ ಇಬ್ಬರ ಮನೆಯವರನ್ನು ನಾನು ಒಪ್ಪಿಸಿದ್ದೇನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ.
ಇನ್ನೂ ಕೇವಲ ಮೂರು ಫೋಟೋ ನೋಡಿ ಯುವತಿ ನಡತೆ ಬಗ್ಗೆ ಸಂಶಯ ಪಟ್ಟ ತಾರೇಶ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗ್ತಿದೆ. ಜೊತೆಗೆ ಅಭಿಲಾಷ್ ಯುವತಿಗೆ ಹೊಸ ಜೀವನ ಕೊಟ್ಟಿದ್ದಾನೆ. ಈ ಬಗ್ಗೆ ಎಲ್ಲರೂ ಖುಷಿಪಡಬೇಕು ಅಂತಿದ್ದಾರೆ ಸ್ಥಳೀಯರೊಬ್ಬರು. ಒಟ್ಟಾರೆ ಎರಡು ಕುಟುಂಬಗಳ ಸಮ್ಮತಿಯಿಂದ ಶುರುವಾದ ಮದುವೆ ಸಂಭ್ರಮ ಒಂದು ಸಿನಿಮೀಯ ರೀತಿಯಲ್ಲಿ ಅಂತ್ಯಕಂಡಿದೆ.

-ಪ್ರತಾಪ್ ಹಿರೀಸಾವೆ ಪವರ್ ಟಿವಿ ಹಾಸನ

LEAVE A REPLY

Please enter your comment!
Please enter your name here

- Advertisment -

Most Popular

Recent Comments