Home ರಾಜ್ಯ ಹಾಸನದಲ್ಲಿ 4,000 ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಹಾಸನದಲ್ಲಿ 4,000 ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಹಾಸನ :  ಜಿಲ್ಲೆಯಲ್ಲಿ ಗುರುವಾರ ಇಬ್ಬರು ಕೊರೋನಾ ಸೋಂಕಿಗೆ ಮೃತರಾಗಿದ್ದಾರೆ. ಇದರೊಂದಿಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ.  ಹೊಸದಾಗಿ 129 ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 4,115ಕ್ಕೆ ಏರಿಕೆಯಾಗಿದೆ.

ಇಂದು ಮೃತಪಟ್ಟವರಲ್ಲಿ ಒಬ್ಬರು ಚನ್ನರಾಯಪಟ್ಟಣ ತಾಲ್ಲೂಕಿನ 80 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ 78 ವರ್ಷದ ಪುರುಷ ಕೊರೋನಾ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಕೊವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಸಕ್ರಿಯವಾಗಿ 1,807 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 2190 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 129 ಕೊರೋನಾ ಸೋಂಕು ಪ್ರಕರಣಗಳಲ್ಲಿ 17 ಜನ ಅರಸೀಕೆರೆ ತಾಲ್ಲೂಕಿನವರು, 18 ಜನ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ ಒಬ್ಬರು, 45 ಜನ ಹಾಸನ ತಾಲ್ಲೂಕು, 8 ಜನ ಹೊಳೆನರಸೀಪುರ ತಾಲ್ಲೂಕು, 21 ಜನ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 16 ಜನ ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments