Home ಸಿನಿ ಪವರ್ ``ಈ ಟೈಮಲ್ಲಿ ಸಾಯೋ ಮಾತ್’’ ಆಡಿದ್ದೇಕೆ ಹರಿಪ್ರಿಯಾ?

“ಈ ಟೈಮಲ್ಲಿ ಸಾಯೋ ಮಾತ್’’ ಆಡಿದ್ದೇಕೆ ಹರಿಪ್ರಿಯಾ?

ಸ್ಯಾಂಡಲ್​ವುಡ್ ಸ್ಟಾರ್ ನಟಿ ಹರಿಪ್ರಿಯಾ ಇದ್ದಕ್ಕಿದ್ದಂತೆ ‘ ಈ ಟೈಮಲ್ಲಿ ಸಾಯೋ ಮಾತ್’ ಆಡಿದ್ದಾರೆ! ಅರೆ ಹರಿಪ್ರಿಯಾ ಹೀಗೇಕೆ ಮಾತಾಡಿದ್ರು ಅಂತ ಭಯ ಪಡ್ಬೇಡಿ… ಇದು ಅವರು ಬರೆದಿರೋ ಆರ್ಟಿಕಲ್ ಒಂದರ ಶೀರ್ಷಿಕೆ!

ಹೌದು, ಸಾಮಾನ್ಯವಾಗಿ ಯಾರಾದ್ರೂ ಸಾಯೋ ಮಾತಾಡಿದ್ರೆ ಈ ಟೈಮಲ್ಲಿ ಸಾಯೋ ಮಾತ್ ಬೇಕಾ ಅಂತ ಯಾರಾದ್ರೂ ಕೇಳೇ ಕೇಳ್ತೀವಿ.. ಪ್ರೀತಿಯಿಂದ ಬೈತೀವಿ. ಅದೇ ಮಾತನ್ನು ಇಟ್ಕೊಂಡು, ಕ್ಯಾಚಿ ಹೆಡ್​ಲೈನ್ ಕೊಟ್ಟು ಹರಿಪ್ರಿಯಾ ತಮ್ಮ ಬ್ಲಾಗ್​ನಲ್ಲಿ ಒಂದೊಳ್ಳೆ ಲೇಖನ ಬರೆದಿದ್ದಾರೆ.

ಈ ಲೇಖನದಲ್ಲಿ ಅವರು ರಿಯಲ್ ಲೈಫ್​ನ ಸಾವಿನ ಬಗ್ಗೆ ಹೇಳಿಲ್ಲ. ಬದಲಾಗಿ ರೀಲ್​ ಲೈಫ್​ನ ಸಾವಿನ ಬಗ್ಗೆ ಹೇಳಿದ್ದಾರೆ.

“ಸಾವೆಂದರೆ ಕೊನೆ, ಆದರೆ ನನ್ನ ಪಾಲಿಗೆ ಅದೇ ಶುರು. ಅಂದ್ರೆ ನಾನು ನನ್ನ ಮೊದಲ ಕೆಲವು ಸಿನಿಮಾಗಳಲ್ಲೇ ಸತ್ತಿದ್ದೆ. ನಾನೊಂಥರ ಸತ್ತು ಸತ್ತು ಬದುಕಿರೋಳು, ಹಹಹ. ಮಜಾ ಗೊತ್ತಾ? ನಮ್ಗೆ ಕಲಾವಿದರಿಗೆ ಡಿಫರೆಂಟ್ ಡಿಫರೆಂಟಾಗಿ ಸಾಯೋ ಚಾನ್ಸ್ ಸಿಗುತ್ತೆ. ನಡೀತ ನಡೀತ , ನಿಂತಾಗ, ಕುಂತಾಗ ಅಥವಾ ಮಲಗಿದಲ್ಲೇ ಸಾವು. ಚೆನ್ನಾಗ್ ಸತ್ರೆ ಚಪ್ಪಾಳೆ ಬೇರೆ ಹೊಡಿತಾರೆ. ಹೀಗೆ ಸೀನ್‌ಗೆ ತಕ್ಕ ಹಾಗೆ ನಾನಾ ಥರದಲ್ಲಿ, ಡಿಫರೆಂಟ್ ಕಾಸ್ಟ್ಯೂಮ್-ಮೇಕಪ್‌ನಲ್ಲಿ ಕಲರ್ ಕಲರ್‌ಫುಲ್ ಆಗಿ ಸಾಯ್ತೀವಿ. ಸತ್ತು ನಿಮ್ ಮನಸಲ್ಲಿ ಉಳಿತೀವಿ. ಹಾಗೆ ಸತ್ ಮೇಲೂ ಮತ್ತೆ ಬದುಕೋಕ್ ಅವಕಾಶ ಇರೋದು ನಮಗೆ ಮಾತ್ರ. ಅದೆಂಥ ಸಾವಿನ ಸೀನೇ ಆದ್ರೂ ‘ಕಟ್’ ಅಂತಿದ್ ಹಾಗೆ ಥಟ್ ಅಂತ ಎದ್ದು ಬಿಡ್ತೀವಿ’’ ಅಂತ ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಇಲ್ಲಿದೆ ಹರಿಪ್ರಿಯಾ ಬರಹ …

ಈ ಟೈಮಲ್ಲಿ ಸಾಯೋ ಮಾತ್ ಬೇಕಾ?

“ಈ ಟೈಮಲ್ಲಿ ಸಾಯೋ ಮಾತ್ ಬೇಕಾ?”, ಯಾರಾದರೂ ಸಾವಿನ ಬಗ್ಗೆ ಮಾತಾಡ್ದಾಗ ಸಡನ್ ಆಗಿ ಈ ಥರದ ಪ್ರಶ್ನೆ ಎದುರಾಗುತ್ತೆ. ಈಗ ನಾನು ಮಾತಾಡೋಕೆ ಐ ಮೀನ್ ಬರೆಯೋಕೆ ಹೊರಟಿರೋದು ಕೂಡ ಸಾವಿನ ಮಾತೇ. ಹಹಹ.. ಹಾಗಂತ “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” ಅಂತ ನೀವ್ ಕೇಳ್ಬೇಡಿ. ಯಾಕಂದ್ರೆ ನಾನ್ ಮಾತಾಡ್ತಿರೋದು ರಿಯಲ್ ಸಾವಲ್ಲ, ಆ್ಯಕ್ಟಿಂಗ್ ಬಗ್ಗೆ.

ಸಾವೆಂದರೆ ಕೊನೆ, ಆದರೆ ನನ್ನ ಪಾಲಿಗೆ ಅದೇ ಶುರು. ಅಂದ್ರೆ ನಾನು ನನ್ನ ಮೊದಲ ಕೆಲವು ಸಿನಿಮಾಗಳಲ್ಲೇ ಸತ್ತಿದ್ದೆ. ನಾನೊಂಥರ ಸತ್ತು ಸತ್ತು ಬದುಕಿರೋಳು, ಹಹಹ. ಮಜಾ ಗೊತ್ತಾ? ನಮ್ಗೆ ಕಲಾವಿದರಿಗೆ ಡಿಫರೆಂಟ್ ಡಿಫರೆಂಟಾಗಿ ಸಾಯೋ ಚಾನ್ಸ್ ಸಿಗುತ್ತೆ. ನಡೀತ ನಡೀತ , ನಿಂತಾಗ, ಕುಂತಾಗ ಅಥವಾ ಮಲಗಿದಲ್ಲೇ ಸಾವು. ಚೆನ್ನಾಗ್ ಸತ್ರೆ ಚಪ್ಪಾಳೆ ಬೇರೆ ಹೊಡಿತಾರೆ . ಹೀಗೆ ಸೀನ್‌ಗೆ ತಕ್ಕ ಹಾಗೆ ನಾನಾ ಥರದಲ್ಲಿ, ಡಿಫರೆಂಟ್ ಕಾಸ್ಟ್ಯೂಮ್-ಮೇಕಪ್‌ನಲ್ಲಿ ಕಲರ್ ಕಲರ್‌ಫುಲ್ ಆಗಿ ಸಾಯ್ತೀವಿ. ಸತ್ತು ನಿಮ್ ಮನಸಲ್ಲಿ ಉಳಿತೀವಿ. ಹಾಗೆ ಸತ್ ಮೇಲೂ ಮತ್ತೆ ಬದುಕೋಕ್ ಅವಕಾಶ ಇರೋದು ನಮಗೆ ಮಾತ್ರ. ಅದೆಂಥ ಸಾವಿನ ಸೀನೇ ಆದ್ರೂ ‘ಕಟ್’ ಅಂತಿದ್ ಹಾಗೆ ಥಟ್ ಅಂತ ಎದ್ದು ಬಿಡ್ತೀವಿ.

ನನ್ನ ಒಂದು ಸಿನಿಮಾದಲ್ಲಿ ಲವರ್ಸ್ ಅಂದ್ರೆ ಹೀರೋ- ಹೀರೋಯಿನ್ ಇಬ್ರೂ ಸತ್ತಿರ್ತಾರೆ. ಮೆರವಣಿಗೆ ತಗೊಂಡು ಹೋಗ್ತಿರ್ತಾರೆ. ಆಗ ಮಧ್ಯಮಧ್ಯ ಗುಡುಗು-ಸಿಡಿಲು-ಮಿಂಚಿನ ಇಫೆಕ್ಟ್‌ಗೆ ಕೈ ಕೈ ಟಚ್ ಆಗಿ ಮಳೆ ಬರುತ್ತೆ. ಸದ್ಯ ಕಣ್ ಮುಚ್ಚಿ ಸತ್ತಿದ್ದೆ. ಆದ್ರೆ ಮಳೆ ನೀರಿನ ಹನಿ ಬೀಳ್ತಿದ್ರೂ ಕಣ್ ಒಂಚೂರೂ ಶೇಕ್ ಆಗದಂತೆ ಇರಬೇಕಿತ್ತು… ಮೂಗಲ್ಲಿ ಹತ್ತಿ ಬೇರೆ! ಎಲ್ಲಿ ಒದ್ದೆ ಆದ ಹತ್ತಿ ಜಾರಿ ಮೂಗೊಳಗೆ ಹೋಗಿಬಿಡುತ್ತೋ ಅಂತ ಭಯ. ಥೂ.. ಸಾಯೋದ್ ಇಷ್ಟ್ ಕಷ್ಟನಾ ಅಂತ ಅನಿಸಿತ್ತು ಆಗ, ಹಹಹ.

ಕಣ್ ಮುಚ್ಕೊಂಡ್ ಸಾಯೋ ಕಥೆನೇ ಹೀಗಾದ್ರೆ, ಇನ್ನು ಕಣ್ ತೆರ್ಕೊಂಡೇ ಸಾಯೋದಂತೂ ವ್ಯಥೆನೇ. “ಕೊರಗ್ಲಿಲ್ಲ, ನರಳ್ಲಿಲ್ಲ.. ಬಿಟ್ ಕಣ್ ಬಿಟ್ಟ ಹಾಗೇ ಇತ್ತು. ಎಂಥ ಒಳ್ಳೇ ಸಾವು!” ಅಂತ ಅದೆಷ್ಟೋ ಜನ ಹೇಳಿದ್ನ ಕೇಳಿದ್ದೆ. ಆದ್ರೆ ಕಣ್ ಬಿಟ್ಕೊಂಡೇ ಸಾಯೋ ಕಷ್ಟ ಏನ್ ಗೊತ್ತಾ!?. ಸುತ್ಲೂ ಗುಂಪಲ್ಲಿ ಯಾರಾದ್ರೂ ತಮಾಷೆ ಮಾಡೋದ್ ಕಾಣಿಸಿದ್ರೂ ಅಥವಾ ಶಾಟ್ ಮಧ್ಯದಲ್ಲಿ ಧೂಳು ಬಂದ್ರೂ‌‌.. ಏನೇ ಆದ್ರೂ ಕಟ್ ಅನ್ನೋವರ್ಗೂ ಕಣ್ ಮಿಟುಕಿಸ್ದೇ ಇರ್ಬೇಕು. ಇಲ್ಲಂದ್ರೆ ‘ಒನ್ ಮೋರ್’ ಆಗುತ್ತೆ. ಹೀಗೆ ತೆಲುಗಿನಲ್ಲಿ ನಾನು ಆ್ಯಕ್ಟ್ ಮಾಡಿದ್ದ “ಜಯಸಿಂಹ” ಸಿನಿಮಾದಲ್ಲಿ ಕಣ್ ಬಿಟ್ಕೊಂಡೇ ಸಾಯೋ ಸೀನ್ ಇತ್ತು. ಒಂದು ದೊಡ್ಡ ಶಾಟ್, ಆ ಸೀನಲ್ಲಿ ಆ್ಯಕ್ಟ್ ಮಾಡ್ತಿದ್ದಾಗ ನನಗಾಗ್ತಿದ್ದ ಕಷ್ಟನಾ ಡೈರೆಕ್ಟರ್ ಕೆ.ಎಸ್.ರವಿಕುಮಾರ್ ಸರ್ ಗಮನಿಸಿದ್ರು. ಕಲಾವಿದರು ಕಷ್ಟಪಡೋದ್ನ ಅಬ್ಸರ್ವ್ ಮಾಡಿ ಸಜೆಷನ್ ಕೊಟ್ಟು ನಮ್ ಕೆಲಸ ಸುಲಭ ಮಾಡ್ತಾರಲ್ವ ಅವ್ರು ನಿಜಕ್ಕೂ ಗ್ರೇಟ್ ಡೈರೆಕ್ಟರ್ಸ್. “ನೋಡು.. ಆ್ಯಕ್ಷನ್ ಅನ್ನೋ ಮುಂಚೆ ಒಮ್ಮೆ ಡೀಪಾಗಿ ಬ್ರೀಥ್ ಇನ್ ಮಾಡ್ಕೊ, ನಂತ್ರ ಕಟ್ ಅನ್ನೋವರ್ಗೂ ಹಾಗೇ ಅರ್ಧತೆರೆದ ಬಾಯಲ್ಲೇ ನಿಧಾನ ಬ್ರೀಥ್ ಔಟ್ ಮಾಡ್ತಾ ಇರು..” ಅಂದ್ರು. ಹಾಗೇ ಮಾಡ್ದೆ, ಸೀನ್ ಸೂಪರ್ ಆಗಿ ಬಂತು. (ಆದ್ರೆ ಇದನ್ನ ಪ್ರಾಪರ್ ಡೈರೆಕ್ಷನ್ ಇಲ್ದೆ ಯಾರಾದ್ರೂ ಒಂಟಿಯಾಗಿ ಮನೆಯಲ್ಲಿ ಪ್ರಯತ್ನ ಮಾಡೋದು ಡೇಂಜರಸ್) ಎಲ್ರಿಗೂ ಬದುಕೋಕೆ ಹೇಳ್ಕೊಟ್ಟ ಗುರು ಇರ್ತಾರೆ, ಆದ್ರೆ ಅವ್ರು ನಂಗೆ ಸಾಯೋಕ್ ಹೇಳ್ಕೊಟ್ಟ ಗುರು ಕೂಡ, ಹಹಹ.. ಆಮೇಲೆ ‘ರಿಕ್ಕಿ’ ಸಿನಿಮಾದಲ್ಲೂ ಹಾಗೇ ಕಣ್ ಬಿಟ್ಕೊಂಡೇ ಈಸಿಯಾಗಿ ಸತ್ತಿದ್ದೆ. ಅದ್ಕೆ ಸಾವಿನ್ ಬಗ್ಗೆ ಈಗ ಈಸಿಯಾಗಿ ಇಷ್ಟೆಲ್ಲ ಮಾತಾಡ್ದೆ.

ಯೆಸ್.. ಇಷ್ಟೊತ್ ನಾನು ಮಾತಾಡಿದ್ದು ರೀಲ್ ಸಾವು, ಅಂದ್ರೆ ಸಾಯೋ ಆ್ಯಕ್ಟಿಂಗ್ ಬಗ್ಗೆನೇ ಆಗಿದ್ರೂ ಎಷ್ಟೋ ಜನಕ್ಕೆ ಈ ಸಾವಿನ ಮಾತು ಇಷ್ಟ ಆಗದೇ ಇರ್ಬೋದು. ನಂಗೂ ಅಷ್ಟೇ, ಕೆಲವೊಂದ್ಸಲ ಹಾಗೇ ಅನ್ಸುತ್ತೆ. ಇದನ್ನು ಓದಿದ್ ಅಮ್ಮ ಕೂಡ ಕೇಳಿದ್ ಇದ್ನೇ.. “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” 

-ಹರಿಪ್ರಿಯಾ, ನಟಿ  http://babeknows.com/

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments