‘ಅವರ ಧ್ವಜದ ಮೇಲೆ ಚಂದ್ರನಿದ್ದಾನೆ, ಚಂದ್ರನ ಮೇಲೆ ನಮ್ಮ ಧ್ವಜ ಹಾರಾಡ್ತಿದೆ’..!

0
119

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿನ್ನೆಯಷ್ಟೇ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸೋಮವಾರ ಮಧ್ಯಾಹ್ನ 2.43ಕ್ಕೆ ಬಾಹುಬಲಿ ಅಂತ ಕರೆಯಲ್ಪಡುವ ಜಿಎಸ್​ಎಲ್​ವಿಎಂಕೆ 111-ಎಂ1 ಉಡಾವಣಾ ವಾಹಕ ಚಂದ್ರಯಾನ-2 ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದು, ಇದರೊಂದಿಗೆ ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಿದಂತಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಬಾಹುಬಲಿ’ ರಾಕೆಟ್ ಬಾನಂಗಳದತ್ತ ಚಿಮ್ಮಿದೆ. ಜುಲೈ 15ರಂದೇ ಬಾಹುಬಲಿ ಉಡ್ಡಯನಗೊಳ್ಳಬೇಕಿತ್ತು. ಆದರೆ. ತಾಂತ್ರಿಕ ದೋಷದಿಂದ ಮುಂದೂಡಲಾಗಿತ್ತು. ನಿನ್ನೆ ಯಶಸ್ವಿಯಾಗಿ ಉಡಾವಣೆಯಾಗಿದೆ.
ಈ ಬಗ್ಗೆ ಕ್ರೀಡಾ ತಾರೆಯರು, ಸಿನಿ ತಾರೆಯರು ಸೇರಿದಂತೆ ಅನೇಕ ಗಣ್ಯರು ಸಂಭ್ರಮದಿಂದ ಟ್ವೀಟ್ ಮಾಡುತ್ತಿದ್ದಾರೆ. ಅಂತೆಯೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ. ಭಜ್ಜಿ ಚಂದ್ರಯಾನ-2ನ್ನು ಮೆಚ್ಚಿ ಟ್ವೀಟ್ ಮಾಡುವುದಲ್ಲದೆ ಪಾಕಿಸ್ತಾನದ ಕಾಲೆಳೆದಿದ್ದಾರೆ.
ಟ್ವೀಟ್​ನಲ್ಲಿ ಪಾಕಿಸ್ತಾನ, ಅಲ್ಜೀರಿಯಾ, ಟರ್ಕಿ, ಮಾಲ್ಡೀವ್ಸ್, ಮಾರಿಟಾನಿಯಾ, ಟುನೀಶಿಯಾ, ಲಿಬಿಯಾ, ಮಲೇಷ್ಯಾ ಹಾಗೂ ಅಜೆರ್ಬೈಜಾನ್ ಫ್ಲಾಗ್​ಗಳನ್ನು ಹಾಕಿ ಈ ಎಲ್ಲಾ ರಾಷ್ಟ್ರಗಳು ಧ್ವಜದಲ್ಲಿ ಚಂದ್ರನ ಚಿತ್ರ ಹೊಂದಿವೆ. ಅದೇರೀತಿ ಭಾರತ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಚೀನಾ ಮತ್ತು ರಷ್ಯಾ ಧ್ವಜಗಳನ್ನು ಬಳಸಿ ಈ ರಾಷ್ಟ್ರಗಳು ಚಂದ್ರನನ್ನು ತಲುಪಿ ಧ್ವಜ ನೆಟ್ಟಿವೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

LEAVE A REPLY

Please enter your comment!
Please enter your name here