Monday, January 17, 2022
Powertv Logo
Homeದೇಶಹೈದರ್​ಪೋರಾ ಎನ್​ಕೌಂಟರ್​, ಮ್ಯಾಜಿಸ್ಟ್ರೇಟ್ ತನಿಖೆಗೆ ಲೆ.ಗವರ್ನರ್ ಆದೇಶ

ಹೈದರ್​ಪೋರಾ ಎನ್​ಕೌಂಟರ್​, ಮ್ಯಾಜಿಸ್ಟ್ರೇಟ್ ತನಿಖೆಗೆ ಲೆ.ಗವರ್ನರ್ ಆದೇಶ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆದ ಹೈದರ್​ಪೋರಾ ಎನ್​ಕೌಂಟರ್​ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಆದೇಶ ಹೊರಡಿಸಿದ್ದಾರೆ. ಕಳೆದ ನವೆಂಬರ್ 15ರಂದು ವಾಣಿಜ್ಯ ಕಟ್ಟಡವೊಂದರಲ್ಲಿ ಇಬ್ಬರು ಉಗ್ರರನ್ನ ಸದೆಬಡಿಯಲಾಗಿತ್ತು.

ಮೃತ ಉಗ್ರರನ್ನ ಪಾಕಿಸ್ತಾನದ ಉಗ್ರ ಹೈದರ್​ ಮತ್ತು ಆತನ ಸಹಚರ ಬನಿಹಾಲ್​ ಅಂತ ಗುರುತಿಸಲಾಗಿತ್ತು. ಸದ್ಯ ಜಮ್ಮು- ಕಾಶ್ಮೀರದ ರಾಜ್ಯಪಾಲರು ಟ್ವೀಟ್​ ಮೂಲಕ ಈ ಮಾಹಿತಿ ನೀಡಿದ್ದು ಹೈದರ್‌ಪೋರಾ ಎನ್‌ಕೌಂಟರ್‌ನಲ್ಲಿ ಎಡಿಎಂ ಶ್ರೇಣಿಯ ಅಧಿಕಾರಿಯಿಂದ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ.

ಕೆಲ ಕಾಲಮಿತಿಯಲ್ಲಿ ವರದಿ ಸಲ್ಲಿಸಿದ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತ ಮುಗ್ಧ ನಾಗರಿಕರ ಜೀವಗಳನ್ನು ರಕ್ಷಿಸುವ ಬದ್ಧತೆಯನ್ನ ಪುನರುಚ್ಚರಿಸುತ್ತೆ ಮತ್ತು ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತದೆ ಅಂತಾ ಟ್ವೀಟ್​ ಮಾಡಲಾಗಿದೆ.

ಸಂತೋಷ್ ಹೊಸಹಳ್ಳಿ, ನವದೆಹಲಿ.

LEAVE A REPLY

Please enter your comment!
Please enter your name here

- Advertisment -

Most Popular

Recent Comments