Home ಪವರ್ ಪಾಲಿಟಿಕ್ಸ್ ''ಬಿಜೆಪಿಯವರೇನು ಸರ್ಕಾರ ಬೀಳಿಸೋದು? ಬೀಳೋಕೆ ನಾವೇ ರೆಡಿ ಇದ್ದೀವಿ''..!

”ಬಿಜೆಪಿಯವರೇನು ಸರ್ಕಾರ ಬೀಳಿಸೋದು? ಬೀಳೋಕೆ ನಾವೇ ರೆಡಿ ಇದ್ದೀವಿ”..!

ದೆಹಲಿ: ‘ಬಿಜೆಪಿಯವರೇನು ಸರ್ಕಾರ ಬೀಳಿಸೋದು? ಬೀಳೋಕೆ ನಾವೇ ರೆಡಿ ಇದ್ದೀವಿ’..! ಹೀಗಂತ ಸ್ಫೋಟಕ ಹೇಳಿಕೆ ನೀಡಿರುವುದು ಬೇರಾರು ಅಲ್ಲ, ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್​.ವಿಶ್ವನಾಥ್ ಅವರು..!

ದೆಹಲಿಯಲ್ಲಿ ಪವರ್​ ಟಿವಿ ಜೊತೆ ಮಾತನಾಡಿದ ಅವರು, ದೋಸ್ತಿ ಸರಕಾರ ಶೀಘ್ರದಲ್ಲೇ ಪತನ ಹೊಂದುವುದು ಖಚಿತ. ಯಾವ ಯಾವ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಸರಕಾದ ಬಗಗೆಗಿನ ಒಲವು ಕಡಿಮೆಯಾಗಿದೆ.  ಶಾಸಕರ ಸಮಸ್ಯೆ ಬಗೆಹರಿಸುವ ಮನಸ್ಥಿತಿ ಮೈತ್ರಿ ನಾಯಕರಿಗಿಲ್ಲ. ರಾಜ್ಯದಲ್ಲಿ ಅರಾಜಕತೆ ನಡೀತಾ ಇದೆ. ಬಿಜೆಪಿಯವರು ಸರಕಾರ ಬೀಳಿಸ್ತೀನಿ ಅಂತಾರೆ. ಅವರೇನು ಬೀಳಿಸೋದು ಬೀಳೋಕೆ ನಾವೇ ರೆಡಿ ಇದ್ದೀವಲ್ಲ. ಯಾರು ಕೂಡ ಮನಸ್ಸಿಟ್ಟು ಕೆಲಸ ಮಾಡ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

ಸಿದ್ದರಾಮಯ್ಯಗೆ ನನ್ನನ್ನು ಸಮನ್ವಯ ಸಮಿತಿಯಲ್ಲಿ ಸೇರಿಸಲು ಇಷ್ಟವಿಲ್ಲ. ಸಿದ್ದರಾಮಯ್ಯ ವೈಯಕ್ತಿಕ ಸೇಡನ್ನು ರಾಜ್ಯದ ಅಭಿವೃದ್ಧಿಗೆ   ಬೆರೆಸಿರೋದು ಸರಿಯಲ್ಲ ಅಂದ ಅವರು, ಬಿಜೆಪಿ ನಾಯಕರ ಜೊತೆಗಿನ ಬ್ರೇಕ್ ಫಾಸ್ಟ್ ವಿಷಯಕ್ಕೆ ಯಾವ್ದೇ ಅರ್ಥ ಕಲ್ಲಿಸಬಾರದು ಅಂತ ಸ್ಪಷ್ಟಪಡಿಸಿದ್ರು.

ವಿಶ್ವನಾಥ್ ಅವರ ಹೇಳಿಕೆ ಭಾರಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆಯ ಬೆನ್ನಲ್ಲೇ  ವಿಶ್ವನಾಥ್ ಅವರ ಈ ಹೇಳಿಕೆ ದೋಸ್ತಿ ಪಕ್ಷಗಳ ಮುಖಂಡರಿಗೆ ಶಾಕ್​ ನೀಡಿದೆ.

 

LEAVE A REPLY

Please enter your comment!
Please enter your name here

- Advertisment -

Most Popular

ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಢ | 8 ಮಂದಿ ಸಜೀವ ದಹನ

ಅಹಮದಾಬಾದ್ : ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಢ ಸಂಭಂವಿಸಿದ್ದು, 8  ಮಂದಿ ರೋಗಿಗಳು ಸಜೀವ ದಹನಗೊಂಡಿದ್ದಾರೆ ವರದಿಯಾಗಿದೆ. ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿನ ಇಂಟೆನ್ಸಿವ್ ಕೇರ್ ಯುನಿಟ್ ( ಐಸಿಯು)...

ಬನ್ನೇರುಘಟ್ಟದಲ್ಲಿ ಸಫಾರಿ ಹುಲಿಯೊಂದಿಗೆ ಕಾಡಿನ ಹುಲಿ ಕಾದಾಟ..!

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹುಲಿ ಮತ್ತು ಕಾಡಿನ ಹುಲಿ ಕಾದಾಡಿಕೊಂಡಿವೆ. ಸಫಾರಿ ಹುಲಿ ಮತ್ತು ಕಾಡಿನ ಹುಲಿ ಮುಖಾಮುಖಿಯಾಗಿದ್ದು, ಕಾದಾಟಕ್ಕಿಳಿದಿವೆ.  ಅವೆರಡರ ನಡುವೆ ತಂತಿ ಬೇಲಿ ಇದ್ದರೂ ಘರ್ಜಿಸುತ್ತಾ ಜಗಳಕ್ಕಿಳಿದಿವೆ. ಹುಲಿಗಳ ಈ ಕಾದಾಟದ...

ಮಲೆನಾಡಿನಲ್ಲಿ ವರ್ಷಧಾರೆ ವೈಭವ ; ಕಣ್ಮನ ಸೆಳೆಯುತ್ತಿದೆ ಜೋಗ ಜಲಪಾತ

 ಶಿವಮೊಗ್ಗ : ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಜೋಗ ಜಲಪಾತ, ಮೈದುಂಬುತ್ತಿದ್ದು, ಮಂಜು ಮುಸುಕಿನ ಚೆಲ್ಲಾಟದ...

ಜಮ್ಮು-ಕಾಶ್ಮೀರದ ಮೊದಲ ಲೆಫ್ಟಿನೆಂಟ್​ ಗವರ್ನರ್ ರಾಜೀನಾಮೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಮ್ಮು-ಕಾಶ್ಮೀರವನ್ನು ವಿಭಜನೆ ಮಾಡಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಲಾಯಿತು. ನಂತರ ಅಕ್ಟೋಬರ್​ನಲ್ಲಿ ಗಿರೀಶ್ ಚಂದ್ರ...

Recent Comments