Sunday, May 29, 2022
Powertv Logo
Homeರಾಜ್ಯಸರ್ಕಾರ ಜನರ ಬದುಕನ್ನು ಕಸಿದುಕೊಳ್ಳಬಾರದು: ಹೆಚ್.ವಿಶ್ವನಾಥ್

ಸರ್ಕಾರ ಜನರ ಬದುಕನ್ನು ಕಸಿದುಕೊಳ್ಳಬಾರದು: ಹೆಚ್.ವಿಶ್ವನಾಥ್

ಮೈಸೂರು : ಕರ್ನಾಟಕದಲ್ಲಿ ಶಾಂತಿ ಕದಡುವವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ. ಜನರ ಜೀವನ ಕಿತ್ತುಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಬುಲ್ಡೊಜರ್ ಪದ್ದತಿ ಅನುಸರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬುಲ್ಡೋಜರ್ ಪದ್ದತಿ ಅನುಸರಿಸೋದು ಸರುಯಲ್ಲ. ಸರ್ಕಾರ ಜನರ ಬದುಕನ್ನು ಕಟ್ಟಬೇಕೆ ಹೊರತು ಜನರ ಬದುಕನ್ನು ಕಸಿದುಕೊಳ್ಳಬಾರದು.

ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಲ ಘಟನೆಗಳನ್ನು ವಿಶ್ಲೇಷಿಸುತ್ತಾ 1976ರ ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ ಸಹ ಇದೇ ರೀತಿ ಬುಲ್ಡೋಜರ್ ಕ್ರಮ ಮಾಡಿದರು. ನಂತರದ ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಇದು ನೆನಪಿರಲಿ ಎಂದು ತಾಕೀತು ಮಾಡಿದರು. ಅಲ್ಲದೇ ಅದರಿಂದ ಇಂದಿರಾಗಾಂಧಿ ದೊಡ್ಡ ಬೆಲೆ ತೆತ್ತಬೇಕಾಯಿತು. ಈಗ ಅದೇ ಪರಿಸ್ಥಿತಿ ಮತ್ತೆ ಮರುಕಳಿಸುತ್ತದೆ. ಸರ್ಕಾರ ನಡೆಸುವವರು ಇತಿಹಾಸವನ್ನು ನೆನೆಪಿಸಿಕೊಳ್ಳಬೇಕು. ಇಲ್ಲವಾದರೆ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಕಿಡಿಕಾರಿದರು.

- Advertisment -

Most Popular

Recent Comments