Saturday, May 28, 2022
Powertv Logo
Homeರಾಜ್ಯಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಹೆಚ್​ಡಿಕೆ

ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಹೆಚ್​ಡಿಕೆ

ಹಾಸನ : ಬಿಜೆಪಿ ಜೊತೆ ಹೋಗಲ್ಲ ಎಂದು ದೇವೇಗೌಡರ ಹೆಸರಿನಲ್ಲಿ ಆಣೆ ಮಾಡಲಿ ಎಂಬ ಸಿದ್ದು ಹೇಳಿಕೆಗೆ ಹೆಚ್​ಡಿಕೆ ತಿರುಗೇಟು ನೀಡಿದೆ.

ಮೊದಲು ಸುಳ್ಳಿನ ರಾಮಯ್ಯನಿಗೆ ನಾನು ಹೇಳೋದು, ನಾನು ಕೇಳಿರೋ ನಾಲ್ಕು ಪ್ರಶ್ನೆಗೆ ಉತ್ತರ ಕೊಡಲಿ, ನಿನ್ನೆ ಅವರ ಟ್ವೀಟ್ ನೋಡಿದೆ ಕೋಮುವಾದ ಜಾತ್ಯಾತೀತವಾದದ ಸಮಯದಲ್ಲಿ ನಿಂತಿದಾರಂತಲ್ಲ. ಇಡೀ ದೇಶದ ಜನ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಕರ್ನಾಟಕ ಒಂದರಲ್ಲಿ ಉಳಿದು ಜೀವ ಆಡುತ್ತಿದೆ. ಇವರು ಯಾವ ಕೋಮುವಾದ ಜಾತ್ಯಾತೀತ ವಾದ ನಿಲ್ಲಿಸುತ್ತಾರೆ. ಇವರ ಪಕ್ಷದವರೇ ಹೋಗಿ ಡಿಜೆಹಳ್ಳಿ ಏನು ಹೋಗಿ ಬೆಂಕಿ ಹಚ್ಚಿದ್ರು ಹುಬ್ಬಳ್ಳಿ ಯಲ್ಲೂ ಅದೇ ಕೆಲಸಕ್ಕೆ ಪ್ರೇರೇಮಣೆ ಅಂತಾ ನೀವೇ ತೋರಿಸುತ್ತಿದ್ದೀರಾ ಎಂದರು.

2008ರ ಆಪರೇಷನ್ ಕಮಲದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಗಿಸಲಿಕ್ಕೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಎಷ್ಟು ಹಣ ಸಂದಾಯ ಮಾಡಿಕೊಂಡ್ರು. ಅವತ್ತು ಅವರು ಮಾಡಿದ ಕೆಲಸ ಜಾತ್ಯಾತೀತ ಮೌಲ್ಯ ಉಳಿಸೋ ಕೆಲಸ ಮಾಡಿದ್ರಾ ಈ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ. ಸಂತೋಷ್ ಬಗ್ಗೆ ಹೇಳ್ತಾರಲ್ಲ‌ ಕಲ್ಲಪ್ಪ ಹಂಡಿಬಾಗ್ ಬಗ್ಗೆ ಯಾಕೆ ಮಾತಾಡಲ್ಲ. ಸಿದ್ದರಾಮಯ್ಯನ ಆಡಳಿತದಿಂದ ಪ್ರಮಾಣಿಕ ಅಧಿಕಾರಿ ಕಲ್ಳಪ್ಪ ಹಂಡಿಬಾಗ್ ಸತ್ತಿದ್ದು ಇದಕ್ಕೆ ಯಾರಿಗಾದ್ರು ಶಿಕ್ಷೆ ಕೊಟ್ಟರಾ..? ಅರ್ಕಾವತಿ ಕರ್ಮಕಾಂಡದಲ್ಲಿ ನೂರಾರುಕೋಟಿ ತಿಂದು ತೇಗಿದ್ರು ಇದಕ್ಕೆ ಉತ್ತರ ಕೊಟ್ಟಿದಿರಾ..? ಇದಕ್ಕೆಲ್ಲಾ ಉತ್ತರ ಕೊಡದೆ ನನ್ನ ಬಗ್ಗೆ ಪ್ರಶ್ನೆ ಮಾಡ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ನಾಲ್ಕು ಪ್ರಶ್ನೆ ಗೆ ಉತ್ತರ ಕೊಡಿ. ದೇವೇಗೌಡರ ಮೇಲೆ ಆಣೆ ಮಾಡಲಿ ಅನ್ನೋದಕ್ಕೆ ಇವರು ಯಾವೂರ ದಾಸಯ್ಯ ಅಂತಾ ಕೇಳ್ತೀನಿ. ಮಾತನಾಡುವಾಗ ಎಚ್ಚರಿಕೆ ಇಂದ ಮಾತನಾಡಲಿ. ಪದೇ ಪದೆ ಬಿಜೆಪಿ ಬಿ ಟಿಂ ಅಂತೀರಾ ಈ ಸರ್ಕಾರ ಬಂದಿದ್ದು ಯಾರಿಂದ ಅಲ್ಲೆಲ್ಲೋ ಸಿದ್ದುವಲದಲ್ಲಿ ಕೂತು ನಡೆಸಿದ್ರಲ್ಲ ಕ್ಯಾಬಿನೆಟ್ ವಿಸ್ತರಣೆ ಮಾಡಬೇಕು ಎಂದು ಟವಲ್ ಕೊಡವಿಕೊಂಡು ಎದ್ದರು. ಅದ್ಯಾರೋ ಇಬ್ಬರು ಇಂಡಿಪೆಂಡೆಟ್ಸ್​ರನ್ನ ಮಂತ್ರಿ ಮಾಡಿಸಿ ಸರ್ಕಾರ ಕಿತ್ತರು. ಸಮ್ಮಿಶ್ರ ಸರ್ಕಾರ ಬೀಳು ಇವರು ಮೂಲ ಕಾರಣ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ಮಾಡಿದರು.

ನೀವು 150 ಗೆಲ್ತೀವಿ ಅಂತಾ ಭಾಷಣಾ ಮಾಡಿಕೊಂಡು ಹೋಗ್ತಿದಿರಲ್ಲ. ನಿಮ್ಮ ಯೋಗ್ಯತೆ 50-60 ಕ್ಕೆ ಬರ್ತೀರ ಅಷ್ಟೇ ತಾನೆ. ಮುಂದಿನ ಚುನಾವಣೆಯಲ್ಲಿ ಜನರು ತಿರಸ್ಕಾರ ಮಾಡ್ತಾರೆ ಬಹುಮತ ಬರಲ್ಲ. ಕುಮಾರಸ್ವಾಮಿ ಜೆಡಿಎಸ್ ಪಕ್ಷ ನಮಗೆ ಬೆಂಬಲ ಕೊಡಬೇಕು ಅಂತಾ ತಾನೆ ನೀನು ಕೇಳ್ತಿರೊದು. ನೀವು 150 ಸ್ಥಾನ ಗೆಲ್ಲೋದಾದರೆ ನಮ್ಮ ಬೆಂಬಲ ಯಾರಿಗೂ ಬೇಕಿಲ್ಲ ಅಲ್ಲವೇ ಕಾಂಗ್ರೆಸ್ 150 ಸ್ಥಾನ ಬಿಜೆಪಿ 150 ಸ್ಥಾನ ಗೆಲ್ತೀವಿ ಅಂದಮೇಲೆ ನನ್ನ ಬೆಂಬಲ ಯಾರಿಗೂ ಬೇಕಿಲ್ಲ ತಾನೆ. ನಾನು ಯಾರಿಗೆ ಬೆಂಬಲ ಕೊಟ್ಟರೆ ಇವರಿಗೆ ಏನು ಆಗಬೇಕು. ನಾನು ಯಾವನ ಜೊತೆ ಮೈತ್ರಿ ಇಲ್ಲ, ಯಾವ ಪಕ್ಷದ ಜೊತೆ ಮೈತ್ರಿ ಇಲ್ಲ. ಮಿಷನ್ 123 ಎಂದು ಜನರ ಸಮಸ್ಯೆ ನೀರಾವರಿ ವಿಚಾರ ಇಟ್ಟು ಕೊಂಡು ನಾವು ಹೊರಟಿದ್ದೇವೆ. ಪ್ರತಿ ಕುಟುಂಬ ಬದುಕಲು ದಾರಿ ತೋರಿಸಲು ಸರ್ಕಾರ ರಚನೆ ಮಾಡಲು 123 ಸ್ಥಾನ ಕೊಡಿ ಎಂದು ಜನತೆ ಮುಂದೆ ಹೊರಟಿದ್ದೇನೆ. ಇವರ ಪ್ರಶ್ನೆಗೆ ಉತ್ತರ ಕೊಡೋ ಅವಶ್ಯಕತೆ ಇಲ್ಲ. ಸ್ವತಂತ್ರ ಸರ್ಕಾರ ರಚನೆ ಮಾಡಲು ಸರ್ಕಾರ ತರೋ ಶಕ್ತಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಇನ್ನೂ ಇಟ್ಟುಕೊಂಡಿದಾರೆ ಎಂದು ಹೇಳಿದ್ದಾರೆ.

- Advertisment -

Most Popular

Recent Comments