Saturday, May 28, 2022
Powertv Logo
Homeರಾಜ್ಯಕರ್ನಾಟಕವನ್ನ ಮತ್ತೊಂದು ಗುಜರಾತ್ ಮಾಡಬೇಡಿ : ಹೆಚ್​​ಡಿಕೆ

ಕರ್ನಾಟಕವನ್ನ ಮತ್ತೊಂದು ಗುಜರಾತ್ ಮಾಡಬೇಡಿ : ಹೆಚ್​​ಡಿಕೆ

ಬೀದರ್​​ : ಕರ್ನಾಟಕವನ್ನು ಉತ್ತರಪ್ರದೇಶ, ಮಧ್ಯಪ್ರದೇಶ ಅಥವಾ ಮತ್ತೊಂದು ಗುಜರಾತ್ ಮಾಡಬೇಡಿ  ಎಂದು ನಾಡಿನ ಆರು ಕೋಟಿ ಜನರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನವಿ ಮಾಡಿಕೊಂಡರು.

ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು ಧರ್ಮವನ್ನ ಮನೆಯಲ್ಲಿ ಆಚರಣೆ ಮಾಡೋಣ. ನಿಮ್ಮ ಹಿಂದು ಧರ್ಮವೋ ಮತ್ತೊಂದು ಧರ್ಮವೋ , ಯಾವುದೇ ಧರ್ಮವಾದರೂ ಕಾಪಾಡೋಣ. ರಸ್ತೆಯಲ್ಲಿ ಬೆಂಕಿ ಇಟ್ಟು,ಕಲ್ಲು ತೂರಾಟ ಮಾಡುವುದಲ್ಲ ಧರ್ಮ ಕಾಪಾಡೋದು ಅಂದರೆ ಎಂದು ಯುವಕರಲ್ಲಿ ಮನವಿ ಮಾಡಿದರು.

ಅದುವಲ್ಲದೇ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಉತ್ತರಪ್ರದೇಶ, ಮಧ್ಯಪ್ರದೇಶ ಅಥವಾ ಮತ್ತೊಂದು ಗುಜರಾತ್ ಮಾಡಬೇಡಿ. ಮತ್ತು ಅಲ್ಲಿ ನಿಯಮಗಳನ್ನು ರಾಜ್ಯಕ್ಕೆ ತಂದು ಮತ್ತಷ್ಟು ಸಂಘರ್ಷಗಳಾಗುವುದು ಬೇಡ ಎಂದು ಕಿಡಿಕಾರಿದರು.

ಇನ್ನು ಕರ್ನಾಟಕ ರಾಜ್ಯಕ್ಕೆ ಬುಲ್ಡೋಜರ್ ತರುವ ಬಗ್ಗೆ ಸಚಿವರೊಬ್ಬರ ಮಾತು ನಾನು ಕೇಳಿಸಿಕೊಂಡಿದ್ದೇನೆ. ನಿಮ್ಮ ಅಂಗಡಿ ಅಕ್ರಮವಾಗಿದೆ ಅಂತ ಅದನ್ನು ಕೆಡವಿ ನಿಮ್ಮ ಎರಡು ಹೊತ್ತಿನ ತುತ್ತನ್ನ ಕಸಿದುಕೊಳ್ಳಲು ಈ ಸರ್ಕಾರ ಅಣಿಯಾಗತ್ತಿದೆ. ಜನರಿಗೆ ಜಾಗವನ್ನು ಸಹ ಕೊಡಲು ಯೋಗ್ಯತೆ ಇಲ್ಲದ ಸರ್ಕಾರ ಎಂದು ಗಂಭೀರ  ಆರೋಪ ಮಾಡಿದರು.

ಅಲ್ಲದೇ ಹಲವು ವಿವಾದಗಳ ಹಿನ್ನೆಲೆ ನಿಮ್ಮ ಬದುಕು ಬೇಕೋ ನಿಮ್ಮ ಜೀವನ‌ ಬೇಕೋ ನೀವು ನಿರ್ಧರಿಸಿ. ಮತ್ತು ಜಟಕಾ ಕಟ್, ಹಲಾಲ್ ಕಟ್ ಹೇಳಿಕೆಗಳ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನ ಈ ಸರ್ಕಾರ ವಿವಾದ ಮಾಡಿದ್ದಾರೆ. ಮತ್ತು ಹಿಜಾಬ್ ಆಯಿತು,  ಜಾತ್ರೆಗಳಲ್ಲಿ ಹಿಂದು ಮುಸ್ಲಿಮರು ಅಣ್ಣ ತಮ್ಮಂದಿರ ತರಹ ಇದ್ದರು ಅವರ ಮಧ್ಯೆ ವ್ಯಾಪಾರ ನಿಲ್ಲಿಸುವ ಯತ್ನ ಮಾಡಿದೆ. ಹಾಗು ಶಾಂತಿಯ ತೋಟದಂತಿರುವ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಇನ್ನು ದೇಶವೆಲ್ಲಾ ನರೇಂದ್ರ ಮೋದಿ, ನರೇಂದ್ರ ಮೋದಿ ಎಂದು ಜಪ ಮಾಡುತ್ತಿದೆ ಅನ್ನೋ ಜನರಿಗೆ ನನಗೆ ಅಧಿಕಾರ ಮುಖ್ಯವಲ್ಲ ಈ ನಾಡಿನ ಜನರ ಬದಕು ಮುಖ್ಯ ಈ ನಾಡಿನ ಶಾಂತಿ ಮುಖ್ಯ ಎಂದು ಪ್ರತಿಕ್ರಿಯಿಸಿದರು.

- Advertisment -

Most Popular

Recent Comments