ವಿಶ್ವಾಸಮತದಲ್ಲಿ ಸಿಎಂಗೆ ಸೋಲು – ಮೈತ್ರಿ ಸರ್ಕಾರ ಪತನ

0
316

ಬೆಂಗಳೂರು : ವಿಶ್ವಾಸ ಮತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸೋಲಾಗಿದೆ. ಇದರೊಂದಿಗೆ ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರ ಪತನವಾಗಿದೆ.
ಸುದೀರ್ಘ ಚರ್ಚೆಯ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸ ಮತಯಾಚನೆ ಮಾಡಿದರು. ವಿಶ್ವಾಸಮತ ನಿರ್ಣಯದ ಪರವಾಗಿ, ಅಂದ್ರೆ ಮೈತ್ರಿ ಪರ 99 ಮತಗಳು ಹಾಗೂ ವಿರುದ್ಧವಾಗಿ 105 ಮತಗಳು ದೊರೆಯಿತು. ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ 14ತಿಂಗಳ ಕಾಂಗ್ರೆಸ್-ಜೆಡಿಎಸ್​ ಸರ್ಕಾರ ಪತನವಾಯಿತು.
ಸದನದಲ್ಲಿ ಹಾಜರಿದ್ದ ಸದಸ್ಯರ ಸಂಖ್ಯಾಬಲ 205 ಇದ್ದು, ಮ್ಯಾಜಿಕ್ ನಂಬರ್ 103 ಆಗಿತ್ತು. 205 ಸದಸ್ಯರಲ್ಲಿ 99 ಸದಸ್ಯರು ದೋಸ್ತಿ ಪರ, 105 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.

 

LEAVE A REPLY

Please enter your comment!
Please enter your name here