“ಸಿಎಂ ಆಗಿದ್ದಕ್ಕೆ ಅವ್ರ ಬಳಿ ಹೋದ್ರು, ಇಲ್ದಿದ್ರೆ ಯಾವ್ ದಾಸನೂ ಹತ್ರ ಬರ್ತಿರ್ಲಿಲ್ಲ”..!

0
186

ಬೆಂಗಳೂರು : ”ಕುಮಾರಸ್ವಾಮಿ ಸಿಎಂ ಆಗಿರುವುದಕ್ಕೆ ಜನ ಅವರ ಬಳಿ ಹೋಗಿರುವುದು. ಇಲ್ಲದಿದ್ರೆ ಯಾವ ದಾಸನೂ ನಿಮ್‌ ಹತ್ರ ಬರ್ತಿರ್ಲಿಲ್ಲ” ಅಂತ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
‘ಮೋದಿಗೆ ವೋಟು, ನನ್ನತ್ರ ಕೆಲಸಕ್ಕೆ ಬರ್ತೀರಾ’ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿಕಾಸಸೌಧದಲ್ಲಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿರುವುದಕ್ಕೆ ಜನ ಅವರ ಬಳಿ ಹೋಗಿರುವುದು. ಇಲ್ಲದಿದ್ರೆ ಯಾವ ದಾಸನೂ ಹತ್ರ ಬರ್ತಿರ್ಲಿಲ್ಲ. ಇವ್ರು ಮುಖ್ಯಮಂತ್ರಿಯಾಗಿದ್ದಾಗ ಜನ ವೋಟ್ ಹಾಕಿಲ್ವಾ? ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಪೂರ್ಣ ಸ್ವಾತಂತ್ರ್ಯವಿದೆ” ಎಂದರು.
”ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಬಿಡಿ. ಈ ಸರ್ಕಾರ ಸರಿ ಇಲ್ಲ ಅಂತ ಜನ ಮೋದಿಗೆ ವೋಟ್ ಹಾಕಿದ್ದಾರೆ” ಅಂತ ಸಿಎಂ ವಿರುದ್ಧ ಸಿಡಿದಿದ್ದಾರೆ.

LEAVE A REPLY

Please enter your comment!
Please enter your name here