ಸಿದ್ದುಗೆ ದೊಡ್ಡಗೌಡರ ಗುದ್ದು…

0
477

ಬೆಂಗಳೂರು :  ಜೆಡಿಎಸ್‌ ಬಿಜೆಪಿ ಬಿ ಟೀಮ್ ಅಂತಾ ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯರವರಿಗೆ ಮಾಜಿ ಪ್ರಧಾನಿ ದೇವೇಗೌಡರು ಸರಿಯಾಗೇ ಗುದ್ದು ಕೊಟ್ಟಿದ್ದಾರೆ. ಇನ್ಮುಂದೆ ನಮ್ಮ ಪಕ್ಷವನ್ನು ಬಿ ಟೀಮ್ ಎಂದು ಕರೆಯೋದಕ್ಕೆ ಆಗೋದಿಲ್ಲ. ನಾನು‌ ಅದನ್ನೆಲ್ಲಾ ಇಷ್ಟು ದಿನ ಸಹಿಸಿಕೊಂಡು ‌ಸುಮ್ಮನಿದ್ದೆ. ಆದರೆ ‌ಅದು ಇನ್ಮುಂದೆ ನಡೆಯುವುದಿಲ್ಲ ಎಂದು ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು
ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ‌ನವರು ಏನೇನು ಪ್ರಯತ್ನ ಮಾಡಿದ್ರು? ಕೊನೆಗೆ ಏನು ಸಕ್ಸಸ್ ಆಯ್ತು? 130 ಇದ್ದವರು ಕೊನೆಗೆ 78ಕ್ಕೆ ಬಂದ್ರು ಅಂತಾ, ಜೆಡಿಎಸ್‌ ಬಿಜೆಪಿ ಬಿ ಟೀಮ್ ಎಂದಿದ್ದ ಸಿದ್ದರಾಮಯ್ಯಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ. ಮೈತ್ರಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ‌ನಾಯಕರ‌ ಭಾವನೆ ಏನಿದೆ ಎಂಬುದು ಗೊತ್ತಿಲ್ಲ.ಅವರ ಪಕ್ಷದ ನಾಯಕರು ಒಂದು ತೀರ್ಮಾನಕ್ಕೆ ಬಂದ್ರೆ ಅದಕ್ಕೆ ನಮ್ಮ ಸಹಮತ ಇರುತ್ತೆ ಅಂದ್ರು. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಾವು ಅಭ್ಯರ್ಥಿ ಹಾಕಿರಲಿಲ್ಲ. ಆದ್ರೆ, ನಮ್ಮವರನ್ನ ಕರೆದುಕೊಂಡು ಹೋಗಿ ಗೆಲ್ಲಿಸಿಕೊಂಡ್ರು ಎಂದು ವಾಗ್ದಾಳಿ ನಡೆಸಿದ್ದಾರೆ

LEAVE A REPLY

Please enter your comment!
Please enter your name here