ಸೆಂಚುರಿ ಬಾರಿಸಿದ ಗುರುಕಿರಣ್​​..!

0
323

ಸಂಗೀತ ನಿರ್ದೇಶಕ ಗುರುಕಿರಣ್ ಸೆಂಚುರಿ ಬಾರಿಸಿದ್ದಾರೆ. ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಹೌದು. ಸಿನಿ ಜರ್ನಿಯ 50ನೇ ವರ್ಷದ ಸಂಭ್ರಮದಲ್ಲಿರುವ ದ್ವಾರಕೀಶ್ ನಿರ್ಮಾಣದ ಆಯುಷ್ಮಾನ್​ ಭವ ಸಿನಿಮಾ ಸಂಗೀತ ನಿರ್ದೇಶಕ ಗುರುಕಿರಣ್​​ಗೆ 100ನೇ ಸಿನಿಮಾ.
ಈ ಬಗ್ಗೆ ಶಿವಣ್ಣ, ”ನೀವೆಲ್ಲಾ ನನ್ನ ಸೆoಚುರಿ ಸ್ಟಾರ್ ಅಂತೀರಿ ಆದ್ರೆ ಈ ಸಿನಿಮಾದ ಮೂಲಕ ಸೆoಚುರಿ ಬಾರಿಸ್ತಿರೋದು ನಮ್ಮ ಸಂಗೀತ ನಿರ್ದೇಶಕ ಗುರುಕಿರಣ್ ” ಎಂದು ಟ್ವೀಟ್​ ಮಾಡಿದ್ದಾರೆ.
ಇನ್ನು ಆಯಷ್ಮಾನ್​ಭವ ಶಿವರಾಜ್​ಕುಮಾರ್ ಮತ್ತು ರಚಿತಾ ರಾಮ್​ ನಟನೆಯ ಸಿನಿಮಾವಾಗಿದ್ದು, ರಿಲೀಸ್​​ಗೆ ರೆಡಿಯಾಗಿದೆ. ವಿಶೇಷವೆಂದ್ರೆ ಗುರುಕಿರಣ್​​ 50ನೇ ಸಿನಿಮಾ ಸತ್ಯ ಇನ್ ಲವ್ ಆಗಿತ್ತು. ಆ ಸಿನಿಮಾದ ನಾಯಕ ಕೂಡ ನಮ್ಮ ಶಿವಣ್ಣ.

LEAVE A REPLY

Please enter your comment!
Please enter your name here