Thursday, September 29, 2022
Powertv Logo
Homeಈ ಕ್ಷಣಗಲ್ಲಿಬಾಯ್ ಗಮ್ಮತ್ತು.. ಬ್ಯೂಟಿ ರೀಷ್ಮಾಗೆ ಪ್ರೇಮ್ಸ್ ಟಿಪ್ಸ್..!

ಗಲ್ಲಿಬಾಯ್ ಗಮ್ಮತ್ತು.. ಬ್ಯೂಟಿ ರೀಷ್ಮಾಗೆ ಪ್ರೇಮ್ಸ್ ಟಿಪ್ಸ್..!

ಪಡ್ಡೆಹುಲಿ ಈಸ್ ಬ್ಯಾಕ್ ಟು ಬ್ಯಾಂಗ್. ಯೆಸ್.. ಗಲ್ಲಿಬಾಯ್ ಅಂತ ಹೇಳಿಕೊಂಡೇ ಖಡಕ್ ಪೊಲೀಸ್ ಆಫೀಸರ್ ಆಗಿ ಕಮಾಲ್ ಮಾಡೋಕೆ ಬರ್ತಿದ್ದಾರೆ ಶ್ರೇಯಸ್. ಸ್ಯಾಂಡಲ್​ವುಡ್​ನ ಗ್ಲಾಮರ್ ಡಾಲ್ ರೀಷ್ಮಾ ಜೊತೆ ರಾಕಿಂಗ್ ರಾಣನ ಬಿಂದಾಸ್ ಸ್ಟೆಪ್ಸ್​ಗೆ ಜೋಗಿ ಪ್ರೇಮ್ಸ್ ಕೊಟ್ಟ ಟಿಪ್ಸ್ ಏನು ಅನ್ನೋದ್ರ ಕಲರ್​ಫುಲ್ ಸ್ಟೋರಿ ನೀವೇ ಓದಿ.

  • ಬುಟ್ಟಬೊಮ್ಮ, ರೌಡಿ ಬೇಬಿ ಶೈಲಿಯ ಡ್ಯಾನ್ಸಿಂಗ್ ನಂಬರ್
  • ಚಂದನ್ ಲೈನು ಟ್ಯೂನು.. ಇಮ್ರಾನ್ ಸ್ಟೆಪ್.. ಅನಿರುದ್ದ್ ಕಂಠ
  • ನವೆಂಬರ್ 11ಕ್ಕೆ ಕಮರ್ಷಿಯಲ್ ಎಂಟರ್​ಟೈನರ್ ರಾಣಾ..!

ಟೀಸರ್ ಹಾಗೂ ಮೇಕಿಂಗ್​ನಿಂದ ಸಖತ್ ಸದ್ದು ಮಾಡ್ತಿದ್ದ ರಾಕಿಂಗ್ ರಾಣಾ ಚಿತ್ರದ ಆಲ್ಬಮ್​ನ ಮತ್ತೊಂದು ಕಲರ್​ಫುಲ್ ಡ್ಯಾನ್ಸಿಂಗ್ ನಂಬರ್ ರಿಲೀಸ್ ಆಗಿದೆ. ಅದೇ ಗಲ್ಲಿಬಾಯ್. ಹೌದು.. ಱಪರ್ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರೋ ಗಲ್ಲಿಬಾಯ್, ರಾಣಾ ಚಿತ್ರದ ಟ್ರಂಪ್​ಕಾರ್ಡ್​ ಸಾಂಗ್ ಆಗಿ ರಂಗೇರಿದೆ.

ಜೋಗಿ ಪ್ರೇಮ್ ಗರಡಿಯಿಂದಲೇ ನಾಯಕಿ ಆಗಿ ಲಾಂಚ್ ಆದಂತಹ ರೀಷ್ಮಾ ನಾಣಯ್ಯ ಹಾಗೂ ಶ್ರೇಯಸ್ ಮಂಜು ಕಾಂಬೋನ ಈ ಹಾಡನ್ನ ಖುದ್ದು ಪ್ರೇಮ್ ಅವ್ರೇ ಬಂದು ರಿಲೀಸ್ ಮಾಡಿದ್ರು. ಅಲ್ಲದೆ, ಸಹೋದರನಂತಹ ಶ್ರೇಯಸ್, ಪ್ರತಿಭಾವಂತ ನಟಿ ರೀಷ್ಮಾಗೆ ಟಿಪ್ಸ್ ಕೂಡ ಕೊಟ್ರು.

45 ಲಕ್ಷ ದಾಖಲೆ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಮಾಡಿರೋ ಕೆ ಮಂಜು, ಈಗ ಆಗಿದ್ರೆ 90 ಲಕ್ಷಕ್ಕಿಂತ ಕಮ್ಮಿ ಕೊಡ್ತಿರಲಿಲ್ಲ. ಈ ಸಿನಿಮಾ ಬಹಳ ಕಷ್ಟ ಪಟ್ಟು ಮಾಡಿದ್ದಾರೆ. ಅದ್ರಲ್ಲೂ ನಮ್ಮ ಕನ್ನಡದ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇವೆ ಅಂತಾರೆ ನಿರ್ಮಾಪಕ ಕೆ ಮಂಜು.

ಹಾಡು ಕೇಳ್ತಿದ್ರೇನೇ ಮೈ ಕೈ ಕುಣಿಯುವಂತಹ ಬೀಟ್ಸ್ ಇದರಲ್ಲಿದ್ದು, ಜಿಮ್ನ್ಯಾಸ್ಟಿಕ್ ಪಂಟರ್ ಶ್ರೇಯಸ್ ಬೊಂಬಾಟ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಪಕ್ಕಾ ಪ್ರಾಕ್ಟೀಸ್ ಮಾಡಿ ರೀಷ್ಮಾ ಜೊತೆ ಸ್ಟೆಪ್ ಹಾಕಿದ್ದಾರೆ. ಇವ್ರ ಡ್ಯಾನ್ಸ್ ಶೈಲಿ ಹಾಗೂ ಸೆಟ್ ನೋಡಿದ್ರೆ ನಮಗೆ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಗೂ ಧನುಷ್- ಸಾಯಿ ಪಲ್ಲವಿ ಜೋಡಿಯ ರೌಡಿ ಬೇಬಿ ಸಾಂಗ್ಸ್ ನೆನಪಾಗ್ತಿವೆ.

ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿರೋ ಈ ಹಾಡನ್ನ ಅನಿರುದ್ದ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ನಂದಕಿಶೋರ್ ನಿರ್ದೇಶನ, ಗಜ್ಜಾಲ್ ಪುರುಷೋತ್ತಮ್ ನಿರ್ಮಾಣದ ರಾಣಾ ಇದೇ ನವೆಂಬರ್ 11ಕ್ಕೆ ಥಿಯೇಟರ್​ಗಳಿಗೆ ಲಗ್ಗೆ ಇಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments