10ನೇ ಕ್ಲಾಸಲ್ಲಿ ಎಲ್ಲಾ ಸಬ್ಜೆಕ್ಟ್​ ಫೇಲ್ ; ಮನೆಯಲ್ಲೇ ರೆಡಿಯಾಯ್ತು 35 ಪ್ಲೇನ್ ಮಾಡೆಲ್!

0
528

ನಾವು ಯಾರನ್ನೂ, ಯಾವತ್ತೂ ಕೂಡ ಹಗುರವಾಗಿ ಕಾಣ್ಬಾರ್ದು. ಯಾರಲ್ಲಿ ಯಾವ ಪ್ರತಿಭೆ ಇರುತ್ತೆ ಅಂತ ಯಾರೂ ಕೂಡ ಅಷ್ಟು ಸುಲಭದಲ್ಲಿ ಅರ್ಥಮಾಡಿಕೊಳ್ಳೋಕೆ ಆಗಲ್ಲ. ಪ್ರತಿಭೆ ಪ್ರತಿಯೊಬ್ಬರಲ್ಲೂ ಅಡಗಿರುವ ಸ್ವತ್ತು. ಆದ್ರೆ, ಅದರ ರೂಪ ಮಾತ್ರ ಬೇರೆ ಬೇರೆ.

ಇಲ್ಲಿ ಇಷ್ಟೆಲ್ಲಾ ಹೇಳೋಕೆ ಕಾರಣ 10ನೇ ತರಗತಿಯಲ್ಲಿ ಫೇಲ್ ಆದ ಒಬ್ಬ ಪೋರ! ಪರೀಕ್ಷೆಯಲ್ಲಿ ಎಲ್ಲಾ ಸಬ್ಜೆಕ್ಟ್​ನಲ್ಲೂ ಫೇಲ್ ಆಗಿರುವ ಈತ ಸಾಧನೆಯಲ್ಲಿ ನಂಬರ್ 1!

ಹೌದು, ಆತನ ಹೆಸರು ಪ್ರಿನ್ಸ್​ ಪಾಂಚಲ್ … ವಯಸ್ಸು 17… ಊರು ಗುಜರಾತಿನ ವಡೋದರ… ಸಾಧನೆ ಇಡೀ ವಿಶ್ವವೇ ಮೆಚ್ಚುವಂತಹದ್ದು!

10ನೇ ಕ್ಲಾಸ್​ಲ್ಲಿ ಎಲ್ಲಾ 6 ಸಬ್ಜೆಕ್ಟ್​​ಗಳಲ್ಲಿ ಫೇಲ್ ಆಗಿ ಮನೆಯಲ್ಲೇ ಇದ್ದ ಪಾಂಚಲ್​ಗೆ ಅಜ್ಜ ಪ್ರೇರಣೆಯಾಗ್ತಾರೆ. ಅಜ್ಜರ ಮಾರ್ಗದರ್ಶನ, ಸ್ಫೂರ್ತಿದಾಯಕ ಪ್ರೀತಿ ಮಾತು ಇವತ್ತು ಪಾಂಚೆಲ್​​ನನ್ನು ಸಾಧಕನನ್ನಾಗಿ ಮಾಡಿದೆ.

ಮನೆಮುಂದೆ  ಹಾಕಿರೋ ಬ್ಯಾನರ್​​ಗಳು, ಫ್ಲೆಕ್ಸ್​ಗಳನ್ನು ಬಳಸಿಕೊಂಡು ಪಾಂಚಲ್ 35 ವಿಮಾನ ಮಾದರಿಗಳನ್ನು ರೆಡಿಮಾಡಿದ್ದು, ಈ ಲೈಟ್​ ವೇಟ್ ಪ್ಲೇನ್​​ ಮಾದರಿಗಳನ್ನು ರಿಮೋಟ್​ ಕಂಟ್ರೋಲ್ ಮೂಲಕ ಆಪರೇಟ್ ಮಾಡ್ಬಹುದಾಗಿದ್ದು, ಸದ್ಯ ಪಾಂಚಾಲ್ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ‘ತಾರೆ ಜಮೀನ್​ ಪರ್’ ಹುಡುಗ ಅಂತ ಕರೀತಿದ್ದಾರೆ.

ಅಮಿರ್​ ಖಾನ್ ಮತ್ತು ದರ್ಶಿಯಲ್ ಸಫಾರಿ ಅಭಿನಯದ ತಾರೆ ಜಮೀನ್​​ ಪರ್  ಸಿನಿಮಾದಲ್ಲಿ ವಿದ್ಯಾರ್ಥಿಯೊಬ್ಬ ಡಿಸ್ಲೆಕ್ಷಿಯಾದಿಂದ ಬಳಲುತ್ತಿರ್ತಾನೆ. ಆಗ ಆತನಿಗೆ ಶಿಕ್ಷಕರಾಗಿ ಬರೋ ಅಮಿರ್ ಖಾತ್, ತನ್ನ ವಿದ್ಯಾರ್ಥಿ ಡಿಸ್ಲೆಕ್ಷಿಯಾದಿಂದ ಹೊರ ಬರಲು ತನ್ನ ವಿದ್ಯಾರ್ಥಿಗೆ ಸಹಕಾರಿ ಆಗುತ್ತಾರೆ.  ಹೀಗೆ  10ನೇ ಕ್ಲಾಸ್  ಫೇಲ್ ಆಗಿದ್ದ ಪಾಂಚಾಲ್ ಅಜ್ಜನ ಪ್ರೇರಣೆಯಿಂದ ಸಾಧಕನಾಗಿದ್ದಾನೆ!

LEAVE A REPLY

Please enter your comment!
Please enter your name here