ಏಕತೆಯ ಪ್ರತಿಮೆ ಮೇಲೆ ದಾಳಿ ಸಾಧ್ಯತೆ..? ಗುಜರಾತ್​ನಲ್ಲಿ ಹೈ ಅಲರ್ಟ್​..!

0
253

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಗುಜರಾತ್​ ಸೇರಿ ದೇಶದ ಹಲವೆಡೆ ಹೈ ಅಲರ್ಟ್​ ಮಾಡಲಾಗಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಗುಜರಾತ್​ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸರ್ದಾರ್​ ವಲ್ಲಭಬಾಯಿ ಪಟೇಲ್​ ಪ್ರತಿಮೆ, ಗುಜರಾತ್​ನ ರೈಲ್ವೇ ನಿಲ್ದಾಣ, ಕರಾವಳಿ ತೀರ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

1,600 ಕಿ.ಮೀ ಗುಜರಾತ್​ ತೀರ ಪ್ರದೇಶ ಪಾಕಿಸ್ತಾನಕ್ಕೆ ಸಮೀಪವಿದ್ದು, 1993 ಹಾಗೂ 2008ರಲ್ಲಿ ಮುಂಬೈ ದಾಳಿ ನಡೆದಾಗ ಉಗ್ರರು ಇದೇ ದಾರಿಯ ಮೂಲಕ ಭಾರತಕ್ಕೆ ಪ್ರವೇಶಿಸಿದ್ದರು. 9 ಕರಾವಳಿ ರಾಜ್ಯಗಳಲ್ಲೂ, ಕೇಂದ್ರಾಡಳಿತ ಪ್ರದೇಶಗಳಲ್ಲೂ ಹೈಅಲರ್ಟ್​ ಘೋಷಿಸಲಾಗಿದ್ದು, 71 ಕರಾವಳಿ ಚೆಕ್​ಪೋಸ್ಟ್​ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪುಲ್ವಾಮಾ ದಾಳಿಗೂ ಮುನ್ನವೇ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಪುಲ್ವಾಮಾ ದಾಳಿ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೈ ಅಲರ್ಟ್​ ಘೋಷಿಸಿದೆ.

LEAVE A REPLY

Please enter your comment!
Please enter your name here