Sunday, May 29, 2022
Powertv Logo
Homeದೇಶಕೇಂದ್ರ ಸರ್ಕಾರದಿಂದ ಬಿಡುಗಡೆಯಾಯ್ತು ಲಾಕ್​ಡೌನ್ -2 ರ ಮಾರ್ಗಸೂಚಿಗಳು : ಏನಿರುತ್ತೆ? ಏನಿರಲ್ಲ?

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಯ್ತು ಲಾಕ್​ಡೌನ್ -2 ರ ಮಾರ್ಗಸೂಚಿಗಳು : ಏನಿರುತ್ತೆ? ಏನಿರಲ್ಲ?

ನವದೆಹಲಿ: ದೇಶದಲ್ಲಿ ಘೋಷಣೆ ಮಾಡಿದ್ದ ಲಾಕ್​ಡೌನ್ ಅವಧಿ ಮಂಗಳವಾರಕ್ಕೆ ಕೊನೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿ ಲಾಕ್​ಡೌನ್  ಅವಧಿಯನ್ನು ಮೇ 3ರವರೆಗೆ ವಿಸ್ತರಣೆ ಮಾಡಿದ್ದರು. ಇದರ ಹಿನ್ನೆಲೆ ಮುಂದಿನ 19 ದಿನಗಳ ಲಾಕ್​ಡೌನ್ ಹೇಗಿರಲಿದೆ ಎಂಬುದರ ಬಗ್ಗೆ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ.

ಇಂದಿನಿಂದ ಲಾಕ್​ಡೌನ್​ನ ಎರಡನೇ ಭಾಗ ಪ್ರಾರಂಭವಾಗಿದ್ದು,  ಮುಂದಿನ 19 ದಿನಗಳ ಕಾಲ ಲಾಕ್​ಡೌನ್ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿಯೂ ಕೇಂದ್ರ ಸರ್ಕಾರ ನೀಡಿದೆ. ಹಾಗಾಗಿ ದೇಶದಲ್ಲಿ ಮುಂದಿನ ಲಾಕ್​ಡೌನ್ ಸಂದರ್ಭದಲ್ಲಿರುವ ಇತಿಮಿತಿಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ…

ಏನಿರುತ್ತೆ?

 • ಅಗತ್ಯ ಸೇವೆಗಳ ಮೇಲೆ ವಿನಾಯಿತಿಗಳನ್ನು ನೀಡಲಾಗಿದೆ
 • ಹಣ್ಣು, ತರಕಾರಿಗಳ್ನು ಹಾಗೂ ಮಾಂಸ ಮಾರಾಟಕ್ಕೆ ವಿನಾಯ್ತಿ
 • ಕೈಗಾರಿಕೆಗಳಿಗೆ ವಿನಾಯಿತಿ
 • ಮೀನುಗಾರಿಕೆ ಮತ್ತು ಮಾರಾಟಕ್ಕೆ ಅನುಮತಿ
 • ಕೊರೋನಾ ಮುಕ್ತ ಪ್ರದೇಶಗಳಲ್ಲಿ ಸರಕು ಸಾಗಣೆಗೆ ಅವಕಾಶ
 • ಕೃಷಿ ಮತ್ತು ಇನ್ನಿತರ ಚಟುವಟಿಕೆಗಳಿಗೂ ರಿಯಾಯಿತಿ
 • ಡೈರಿ ಉತ್ಪನ್ನಗಳ ತಯಾರಿಕೆಗೆ ವಿನಾಯ್ತಿ
 • ರಸಗೊಬ್ಬರ, ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ
 • ಐಟಿ-ಹಾರ್ಡ್​ವೇರ್​ ಕೈಗಾರಿಕೆಗಳಿಗೆ ವಿನಾಯ್ತಿ
 • ಅಂತ್ಯಸಂಸ್ಕಾರದಲ್ಲಿ ಕೇವಲ 20 ಮಂದಿ ಮಾತ್ರ ಭಾಗವಹಿಸಬೇಕು
 • ಆರೋಗ್ಯ ಸಂಬಂಧಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ
 • ರಬ್ಬರ್​ ಕೃಷಿಗೆ ಶೇ.50ರಷ್ಟು ಕಾರ್ಮಿಕರನ್ನು ಬಳಸಿಕೊಳ್ಳಬಹುದು
 • ಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆಗಳು ಸಿಗಲಿವೆ
 • ಲ್ಯಾಬ್‌, ಮೆಡಿಕಲ್ ಶಾಪ್​ಗಳು ಎಂದಿನಂತೆ ಕಾರ್ಯ
 • ಕೃಷಿ ಸಲಕರಣೆ ಮಾರಾಟಕ್ಕೂ ಅನುವು
 • ಬ್ಯಾಂಕ್​ಗಳು, ಎಟಿಎಂಗಳು ಎಂದಿನಂತೆ ಕಾರ್ಯ
 • ವಿಮಾ ಕಂಪನಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ

ಏನಿರಲ್ಲ?

 • ಮೇ 3ರ ವರೆಗೆ ಓಲಾ, ಊಬರ್​, ಆಟೋ ಚಾಲನೆಗೆ ಅವಕಾಶವಿಲ್ಲ
 • ವಿಮಾನ, ರೈಲು, ಬಸ್​ ಸಂಚಾರ ಸಂಪೂರ್ಣ ಬಂದ್
 • ಮದ್ಯ ಮಾರಾಟ ಮಳಿಗೆ ಓಪನ್​ಗೆ ಅವಕಾಶವಿಲ್ಲ
 • ಮೇ3 ರವರೆಗೂ ಮೆಟ್ರೋ ರೈಲು ಸಂಚಾರ ಬಂದ್
 • ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳೆಲ್ಲಾ ಬಂದ್
 • ಧಾರ್ಮಿಕ ಕ್ಷೇತ್ರಗಳು, ದೇಗುಲಗಳಿಗೆ ಪ್ರವೇಶವಿಲ್ಲ
 • ಸಾರ್ವಜನಿಕ ಸಮಾರಂಭಗಳೂ ರದ್ದು
 • ಹೋಟೆಲ್, ಪಬ್​, ಕ್ಲಬ್​ಗಳಿಗೂ ನಿರ್ಬಂಧ

LEAVE A REPLY

Please enter your comment!
Please enter your name here

- Advertisment -

Most Popular

Recent Comments