ಬೆಂಗಳೂರು: ಕಳೆದ ಹತ್ತು ತಿಂಗಳಿಂದ ಕಿಲ್ಲರ್ ಕೊರೋನ ಕಾರಣದಿಂದ ಶಾಲೆಗಳನ್ನು ಮಕ್ಕಳ ಆರೋಗ್ಯ ಹಿತ ದೃಷ್ಠಯಿಂದ ಮುಚ್ಚಲಾಗಿತ್ತು.
ಕಿಲ್ಲರ್ ಕೊರೋನ ನಡುವೆ 10 ರಿಂದ 12ನೇ ತರಗತಿ ಶಾಲೆ ಆರಂಭಿಸಲು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ ಎಂದು ಸಭೆ ಬಳಿಕ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. ಕೋವಿಡ್ ನಡುವೆ SSLC ಪರೀಕ್ಷೆಯನ್ನು ಯಶಶ್ವಿಯಾಗಿ ನಡೆಸಿದ್ದೇವೆ. ಅದೇ ಮಾದರಿಯಲ್ಲಿ ಎಚ್ಚರಿಕೆಯಿಂದ ಶಾಲೆ ತೆರೆಯಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಿಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅದೇ ರೀತಿ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಶುರು ಮಾಡಲು ಸಲಹೆ ನೀಡಿದ್ದಾರೆ. ವಿದ್ಯಾಗಮ ಆರಂಭ ಮಾಡುವುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಜನವರಿ 1 ರಿಂದ ಮತ್ತೆ ವಿದ್ಯಾಗಮ ಶುರುವಾಗಲಿದೆ ಎಂದು ಹೇಳಿದ್ದಾರೆ.